ಬೆಳಗಾವಿ: ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಟಿಕೆಟ್ ನೀಡುವಂತೆ ಮರಾಠಿಯಲ್ಲೇ ಕೇಳಿದಂತ ಯುವತಿಗೆ ಕನ್ನಡ ಬರೋದಿಲ್ವ ಕನ್ನಡದಲ್ಲೇ ಕೇಳಿ ಎಂಬುದಾಗಿ ಕಂಡಕ್ಟರ್ ತಿಳಿಸಿದ್ದರು. ಇಷ್ಟಕ್ಕೇ ಮರಾಠಿ ಯುವಕರು ಬಸ್ ನಿಲ್ಲಿಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಸುಳೇಬಾವಿ ಹಾಗೂ ಬಾಳೆಕುಂದ್ರಿ ಮಾಗ್ರ ಮಧ್ಯದಲ್ಲಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಮರಾಠಿ ಯುವಕರು ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿದ್ದಂತ ಕಂಡಕ್ಟರ್ ಮಹದೇವ ಹುಕ್ಕೇರಿ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಈ ಪ್ರಕರಣ ಸಂಬಂಧ ನಿರ್ವಾಹಕ ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಮಾರುತಿ ಆಲಿಯಾಸ್ ತುಮರಿ ದತ್ತು ಚಂದಗಡಕರ, ರಾಹುಲ್ ರಾಜು ನಾಯ್ಡು ಹಾಗೂ ಬಾಳು ಸುರೇಶ್ ಗೊಂಜೇಕರ ಎಂಬುವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.




