ಚಾಮರಾಜನಗರ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವಂತ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಬಸ್ತಿಪುರದಲ್ಲಿ ಏಣ್ಣೆ ಏಟಲ್ಲಿ ಆನಂದ್ ಎಂಬಾತ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರಿಂದ ತೀವ್ರವಾಗಿ ಸುಟ್ಟ ಗಾಯವಾಗಿರೋದಾಗಿ ತಿಳಿದು ಬಂದಿದೆ.
ಬಸ್ತಿಪುರದ ಕಾಲುವೆ ಬಳಿಯಲ್ಲಿ 45 ವರ್ಷದ ಆನಂದ್ ಎಂಬಾತ ಮಧ್ಯದ ನಶೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದಾನೆ. ಎಣ್ಣೆ ಏಟಲ್ಲಿ ರಂಪಾಟ ಮಾಡಿ, ಆ ನಂತ್ರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.




