ಬೆಂಗಳೂರು: ಕನ್ನಡದ ಖ್ಯಾತ ಸಿರಿಯಲ್ ನಟಿ ನಂದಿನಿ ಆತ್ಮ**ಹ*ತ್ಯೆಗೆ ಶರಣಾಗಿದ್ದಾರೆ. ಆ ಮೂಲಕ ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರವಾಹಿ ನಟಿ ಇನ್ನಿಲ್ಲವಾಗಿದ್ದಾರೆ. ಆರ್ ಆರ್ ನಗರದಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಕೊಟ್ಟೂರಿನ ಮೂಲದ ನಂದಿನಿ ಸಿಎಂ ಅವರು ಧಾರವಾಹಿಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ನಟಿಯಾಗಿದ್ದರು. ಕನ್ನಡದ ಜೀವ ಹೂವಾಗಿದೆ. ಸಂಘರ್ಷ, ಮಧುಮಗಳು, ನೀನಾದೆ ನಾ ಧಾರವಾಹಿಗಳಲ್ಲಿ ಅವರು ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು ಕೂಡ.
ಕನ್ನಡವಲ್ಲದೇ ತಮಿಳು, ತೆಲುಗಿನಲ್ಲಿಯೂ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಂತ ನಟಿ ನಂದಿನಿ ಆಗಿದ್ದಾರೆ. ಗೌರಿ ಧಾರವಾಹಿಯಲ್ಲಿ ವಿಷ ಕುಡಿಯುವ ದೃಶ್ಯದಲ್ಲಿ ಕಾಣಿಸಿಕೊಂಡ ವೇಳೆಯಲ್ಲಿ ಅವರು , ಇದೀಗ ರಿಯಲ್ ಲೈಫ್ ನಲ್ಲಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತಮಿಳು ಧಾರಾವಾಹಿಯಲ್ಲಿ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ನಂದಿನಿ ಅವರು ಆತ್ಮಹತ್ಯೆಗೆ ಯಾವ ಕಾರಣ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.




