BREAKING: ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ಕರ್ನಾಟಕ ರಾಜ್ಯಪಾಲರು ಅಂಕಿತ

ಬೆಂಗಳೂರು: ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ಕೊನೆಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ತೀವ್ರ ವಿರೋಧದ ನಡುವೆಯೂ ದಲಿತರ ಒಳ ಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಇಂದು ದಲಿತ ಸಮುದಾಯದ ಸಚಿವರಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲಾಗಿತ್ತು. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತಂದರು. ಮೀಸಲಾತಿ ಪೆಂಡಿಂಗ್ ನಿಂದ ನೇಮಕಾತಿ ವಿಳಂಬದ ಬಗ್ಗೆಯೂ ಪ್ರಸ್ತಾಪಿಸಿದ್ರು.

ರಾಜ್ಯಪಾಲರಿಗೆ ದಲಿತ ಸಮುದಾಯದ ಸಚಿವರ ನಿಯೋಗವು ಸಂಪೂರ್ಣ ವಿವರಣೆಯನ್ನು ನೀಡಿತು. ಮುಂಬಡ್ತಿ, ನೇಮಕಾತಿಯಲ್ಲಿ ಇರುವ ಗೊಂದಲಗಳ ಬಗ್ಗೆಯೂ ವಿವರಣೆ ನೀಡಲಾಯಿತು. ಹೀಗಾಗಿ ಮತ್ತೊಮ್ಮೆ ಪರಿಶೀಲಿಸಿ ಕೆಲವು ಗೊಂದಲಗಳ ನಡುವೆಯೂ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ಸಹಿ ಹಾಕಿ, ಅಂಗೀಕಾರದ ಮುದ್ರೆಯನ್ನು ಒತ್ತಿದ್ದಾರೆ.