BREAKING: ಬೆಂಗಳೂರಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮೇಲೆ ಮೂವರು ಪೊಲೀಸರು ಹಲ್ಲೆ

ಬೆಂಗಳೂರು: ಕಾಫಿ ಬಿಲ್ ಕೇಳಿದಕ್ಕೆ ಹೋಟೆಲ್ ಸಿಬ್ಬಂದಿಯ ಮೇಲೆ ಮೂವರು ಪೊಲೀಸರು ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವಂತ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದಂತ ಅಲ್ಫಾ ಕ್ಯಾಂಟೀನ್ ಸಿಬ್ಬಂದಿಯ ಮೇಲೆ ಕಾಫಿ ಬಿಲ್ ಕೊಡಿ ಅಂತ ಕೇಳಿದ್ದಕ್ಕೆ ಮೂವರು ಪೊಲೀಸರು ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ.

ಏರ್ ಪೋರ್ಟ್ ಠಾಣೆಯ ಮೂವರು ಕಾನ್ಸ್ ಸ್ಟೇಬಲ್ ಗಳು ಆಲ್ಪಾ ಕ್ಯಾಂಟೀನ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವಂತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಏರ್ ಪೋರ್ಟ್ ಠಾಣೆಯ ಗಂಗರಾಜು, ಬಾಳಪ್ಪ ಹಾಗೂ ಕುಮಾರ್ ಎಂಬುವರೇ ಕ್ಯಾಂಟೀನ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದಂತ ಪೊಲೀಸ್ ಪೇದೆಗಳಾಗಿದ್ದಾರೆ.

ನೈಟ್ ಬೀಟ್ ವೇಳೆಯಲ್ಲಿ ಕಾಫಿ ಕುಡಿಯಲು ಹೋಗಿದ್ದಾಗ ಮೂವರು ಪೇದೆಗಳಿಗೆ ಆಲ್ಫಾ ಕ್ಯಾಂಟೀನ್ ಸಿಬ್ಬಂದಿಗಳು ನೀಡಿದ್ದಾರೆ. ಪೊಲೀಸ್ ಕಾನ್ಸ್ ಸ್ಟೇಬಲ್ ಕುಡಿದಂತ ಕಾಫಿಯ ಹಣ ಕೊಡುವಂತೆ ಕೇಳಿದ್ದಾರೆ. ಆಗ ಪೊಲೀಸರಿಂದಲೇ ಹಣ ಕೇಳ್ತೀಯ ಅಂತ ಹಲ್ಲೆ ಮಾಡಿದ್ದಾಗಿ ಕ್ಯಾಂಟೀನ್ ಸಿಬ್ಬಂದಿಗಳು ಆರೋಪಿಸಿದ್ದಾರೆ. ಈ ಸಂಬಂಧ ಕ್ಯಾಂಟೀನ್ ಸಿಬ್ಬಂದಿಗಳು ನೀಡಿದಂತ ದೂರಿನ ಆಧಾರದ ಮೇಲೆ ಮೂವರು ಪೊಲೀಸ್ ಪೇದಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.