ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 33 ಸ್ವತ್ತುಗಳು ಕೇಂದ್ರ ನಗರ ಪಾಲಿಕೆ ವಶಕ್ಕೆ ಪಡೆಯಲಾಗಿದೆ. ಸ್ವತ್ತು ಮಾಲೀಕರು ತಕ್ಷಣವೇ ಬಾಕಿ ತೆರಿಗೆ ಪಾವತಿಸಿದಲ್ಲಿ ಕಾನೂನು ಕ್ರಮಗಳಿಂದ ಕೈಬಿಡಲಾಗುವುದು ಎಂಬುದಾಗಿ ಜಿಪಿಎ ತಿಳಿಸಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಭಾಗವಾಗಿ, ದಿನಾಂಕ: 21-02-2026 ರಂದು ಸಾರ್ವಜನಿಕ ಹರಾಜು ಮೂಲಕ ಸ್ವತ್ತುಗಳನ್ನು ಮಾರಾಟ ಮಾಡಲು ಪ್ರಕಟಣೆ ಹೊರಡಿಸಲಾಗಿತ್ತು.
ಆದರೆ, ನಿಗದಿತ ದಿನಾಂಕದಂದು ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ವ್ಯಕ್ತಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದ ಕಾರಣ, ಸಂಬಂಧಿತ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಂಡು, ವಲಯ-1 ವ್ಯಾಪ್ತಿಯ 19 ಸ್ವತ್ತುಗಳ ಖಾತೆಗಳನ್ನು ಹಾಗೂ ವಲಯ-2 ವ್ಯಾಪ್ತಿಯ 14 ಸ್ವತ್ತುಗಳ ಖಾತೆಗಳನ್ನು ಒಟ್ಟು 33 ಸ್ವತ್ತುಗಳು ಬೆಂಗಳೂರು ಕೇಂದ್ರ ನಗರ ಪಾಲಿಕೆ ಹೆಸರಿನಲ್ಲಿ ದಾಖಲಿಸಿಕೊಳ್ಳಲು ಆದೇಶಿಸಲಾಗಿದೆ. (ಪಟ್ಟಿ ಲಗತ್ತಿಸಲಾಗಿದೆ).
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತು ಮಾಲೀಕರು ತಕ್ಷಣವೇ ಬಾಕಿ ತೆರಿಗೆ ಪಾವತಿಸಿದಲ್ಲಿ ಕಾನೂನು ಕ್ರಮಗಳಿಂದ ಕೈಬಿಡಲಾಗುವುದೆಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ಮನವಿ ಮಾಡಿದ್ದಾರೆ.




