ಬೆಳಗಾವಿ: ಜಿಲ್ಲೆಯಲ್ಲಿ ದೇವಸ್ಥಾನದ ಆನೆಯೊಂದು ಮೇವು ಹಾಕೋದಕ್ಕೆ ತೆರಳಿದಂತ ಮಾವುತನ ಮೇಲೆಯೇ ಕೊಚ್ಚಿಗೆದ್ದು ತುಳಿದು ಕೊಂದಿರುವಂತ ಘಟನೆ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಅಲಖನೂರಿನಲ್ಲಿ ಇರುವಂತ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಆನೆಯೊಂದನ್ನು ಸಾಕಲಾಗಿತ್ತು. ಇಂದು ಬೆಳಿಗ್ಗೆ ಮೇವು ಹಾಕೋದಕ್ಕೆ ತೆರಳಿದಂತ ಸಂದರ್ಭದಲ್ಲಿ ಮಾವುತ ಧರೆಪ್ಪನನ್ನೇ ತುಳಿದು ಕೊಂದಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಮಾವುತ ಧರೆಪ್ಪ ಅವರ ಪತ್ನಿ 10 ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮನೀಡಿದ್ದರು. ಧರೆಪ್ಪ ತಂದೆಯಾಗಿದ್ದರು. ಇಂದು ದೇವಸ್ಥಾನದ ಸಾಕಾನೆಯ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಾರೊಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




