ತಿರುಪತಿಯಲ್ಲಿ ಕಾಲ್ತುಳಿತದಿಂದ ಮೂವರು ಭಕ್ತರು ಸಾವು, ಹಲವರಿಗೆ ಗಾಯ

ಆಂಧ್ರಪ್ರದೇಶ: ವೈಕುಂಠ ಏಕಾದಶಿ ಆಚರಣೆಗಾಗಿ ಸ್ಥಾಪಿಸಲಾದ ಟೋಕನ್ ಕೌಂಟರ್ಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ತಮಿಳುನಾಡಿನ ಸೇಲಂನ ಮಹಿಳೆ ಸೇರಿದಂತೆ ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.

ತಿರುಪತಿಯಲ್ಲಿ ಬುಧವಾರ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ತಿರುಮಲದ ವೆಂಕಟೇಶ್ವರ ದೇವಾಲಯದ ವೈಕುಂಠ ದ್ವಾರ ದರ್ಶನಕ್ಕಾಗಿ ಟೋಕನ್ ವಿತರಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ತಿರುಪತಿ ವಿಷ್ಣು ನಿವಾಸದಲ್ಲಿ ಟೋಕನ್ಗಳನ್ನು ವಿತರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಒಬ್ಬಳನ್ನು ಮಲ್ಲಿಕಾ ಎಂದು ಗುರುತಿಸಲಾಗಿದ್ದು, ತಮಿಳುನಾಡು ಮೂಲದವಳು ಎಂದು ತೆಲಂಗಾಣ ಟುಡೇ ವರದಿ ಮಾಡಿದೆ.