ತಿರುಪತಿ ತಿರುಮಲದಲ್ಲಿ ಮತ್ತೊಂದು ಅವಘಡ: ಲಡ್ಡು ಪ್ರಸಾದ ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ

ತಿರುಮಲ: ಕೆಲ ದಿನಗಳ ಹಿಂದಷ್ಟೇ ವೈಕುಂಠ ಏಕಾದಶಿ ಟಿಕೆಟ್ ಪಡೆಯಲು ಮುಗಿಬಿದ್ದ ಕಾರಣ ಕಾಲ್ತುಳಿತ ಉಂಟಾಗಿ 6 ಭಕ್ತರು ತಿರುಪತಿಯಲ್ಲಿ ಸಾವನ್ನಪ್ಪಿದ್ದರು. ಈಗ ಮತ್ತೊಂದು ಅವಘಡ ಉಂಟಾಗಿದೆ. ಲಡ್ಡು ಪ್ರಸಾದ ಕೌಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ತಿರುಮಲ ಗಿರಿಯ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಳಿಯಲ್ಲಿ 47ನೇ ಲಡ್ಡು ಪ್ರಸಾದ ಕೌಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಕಾಡಲೇ ಟಿಟಿಡಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ.