ಟೇಕಪ್ ಆದ 30 ಸೆಕೆಂಡಲ್ಲೇ ಏರ್ ಇಂಡಿಯಾ ವಿಮಾನ ಪತನ: ಇಲ್ಲಿದೆ ಬೆಚ್ಚಿ ಬೀಳಿಸೋ ವೀಡಿಯೋ

ಗುಜರಾತ್: ಗುರುವಾರ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ಪರಿಣಾಮ 241 ಜನರು ಸಾವನ್ನಪ್ಪಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಪ್ ಆದಂತ 30 ಸೆಕೆಂಡುಗಳಲೇ ಏರ್ ಇಂಡಿಯಾ ವಿಮಾನ ಬೆಂಕಿಯ ಉಂಡೆಯಾಗಿ ಸಿಡಿದಿದೆ. ಆ ವೈರಲ್ ವೀಡಿಯೋ ಮುಂದಿದೆ ನೋಡಿ.

ಬೋಯಿಂಗ್ 787 ಡ್ರೀಮ್‌ಲೈನರ್ (AI171) ವಿಮಾನವು ಟೇಕ್ ಆಫ್ ಆದ ನಂತರ ವೇಗವಾಗಿ ಎತ್ತರವನ್ನು ಕಳೆದುಕೊಂಡು ಕೆಳಗೆ ಇಳಿದು ದುರಂತಕ್ಕೆ ಈಡಾಗಿ ಬೆಂಕಿಯ ಉಂಡೆಯಾಗಿ ಸಿಡಿದಿದ್ದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತದೆ.

ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಸಿಟಿ ಸಿವಿಲ್ ಆಸ್ಪತ್ರೆ ಮತ್ತು ಬಿಜೆ ವೈದ್ಯಕೀಯ ಕಾಲೇಜಿಗೆ ಅಪ್ಪಳಿಸಿತು ಮತ್ತು ಬೆಂಕಿಯ ಉಂಡೆಯಾಗಿ ಸಿಡಿಯಿತು. ಆ ಬೆಚ್ಚಿ ಬೀಳಿಸುವಂತ ಏರ್ ಇಂಡಿಯಾ ವಿಮಾನ ಅಪಘಾತದ ವೀಡಿಯೋ ಈ ಕೆಳಗಿದೆ ನೋಡಿ.

ಅಹಮದಾಬಾದ್‌ನಿಂದ 23ನೇ ರನ್‌ವೇಯಿಂದ IST ಸಮಯ 13.39 ಕ್ಕೆ ಹೊರಟ ವಿಮಾನವು ATC ಗೆ ‘ಮೇಡೇ’ ಕರೆ ನೀಡಿತು. ಆದರೆ ATC ಮಾಡಿದ ಕರೆಗಳಿಗೆ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತನಿಖೆಗಾಗಿ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತಿಳಿಸಿದೆ.

ಜೂನ್ 12, 2025 ರಂದು, ಅಹಮದಾಬಾದ್‌ನಿಂದ ಗ್ಯಾಟ್ವಿಕ್‌ಗೆ AI-171 ವಿಮಾನವನ್ನು ಚಲಾಯಿಸುತ್ತಿದ್ದ ಏರ್ ಇಂಡಿಯಾ B787 ವಿಮಾನ VT-ANB, ಅಹಮದಾಬಾದ್‌ನಿಂದ ಗ್ಯಾಟ್ವಿಕ್‌ಗೆ ಟೇಕ್ ಆಫ್ ಆದ ತಕ್ಷಣ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 242 ಜನರಿದ್ದರು. ಇದರಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಇದ್ದರು ಎಂದು ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.