BREAKING: ರಾಜ್ಯದ ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ: ಅಬಕಾರಿ ಲೈಸೆನ್ಸ್ ಶುಲ್ಕ ಶೇ.50ರಷ್ಟು ಇಳಿಕೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಮದ್ಯದಂಗಡಿ ಮಾಲೀಕರಿಗೆ ಗುಡ್ ನ್ಯೂಸ್ ಎನ್ನುವಂತೆ ಅಬಕಾರಿ ಲೈಸೆನ್ಸ್ ಶುಲ್ಕ ಶೇ.50ರಷ್ಟು ಇಳಿಕೆ ಮಾಡಿ ಅಧಿಕೃತ ಆದೇಶ ಮಾಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಅಬಕಾರಿ ಲೈಸೆನ್ಸ್ ನವೀಕರಣ ಶುಲ್ಕವನ್ನು ಇಳಿಕೆ ಮಾಡಲಾಗಿದೆ.

ಚಿಲ್ಲರೆ ಅಂಗಡಿಗಳ ಸನ್ನದ್ದು ನವೀಕರಣ ಶುಲ್ಕವನ್ನು 20 ಲಕ್ಷಗಳಿಗಿಂತ ಹೆಚ್ಚು ಜನರು ಹೊಂದಿರುವ ಮಹಾನಗರ ಪಾಲಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ ರೂ.9 ಲಕ್ಷಕ್ಕೆ ಇರಿಸಲಾಗಿದೆ. ಇತರೆ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ 7.50 ಲಕ್ಷಕ್ಕೆ ನಿಗದಿ ಪಡಿಸಿದೆ.

ಇನ್ನೂ ನಗರಸಭೆ ಪ್ರದೇಶಗಳ ವ್ಯಾಪ್ತಿಯಲ್ಲಿ ರೂ.6.75 ಲಕ್ಷ, ಪಟ್ಟಣ ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಇತರೆ ಪ್ರದೇಶಗಳಲ್ಲಿ ರೂ.6 ಲಕ್ಷಕ್ಕೆ ಇರಿಸಲಾಗಿದೆ.

ಕ್ಲಬ್ ಗಳಿಗೆ 20ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವಂತ ಮಹಾನಗರ ಪಾಲಿಕೆ ಪ್ರದೇಶ ವ್ಯಾಪ್ತಿಯಲ್ಲಿ 9.75 ಲಕ್ಷ, ಇತರೆ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ 7.50 ಲಕ್ಷ, ನಗರಸಭೆ ಪ್ರದೇಶಗಳಲ್ಲಿ ರೂ.6 ಲಕ್ಷ, ಪಟ್ಟಣ ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಇತರೆ ಪ್ರದೇಶಗಳಲ್ಲಿ 3 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.