ವಿಜಯಪುರದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲ್ಲಲು ಯತ್ನಿಸಿದ ಪತ್ನಿ: ತಪ್ಪಿದ್ದೇಗೆ ಗೊತ್ತಾ?

ವಿಜಯಪುರ: ಜಿಲ್ಲೆಯಲ್ಲಿ ಪ್ರಿಯಕರನ ಜೊತೆಗೆ ಸೇರಿದಂತ ಪತ್ನಿಯೊಬ್ಬರು, ತನ್ನ ಪತಿಯನ್ನೇ ಕೊಲ್ಲಲು ಯತ್ನಿಸಿದಂತ ಘಟನೆ ನಡೆದಿದೆ. ಆದರೇ ಕೊಲೆ ಯತ್ನ ವಿಫಲವಾಗಿದೆ. ಅದು ಹೇಗೆ ಅಂತ ಮುಂದೆ ಓದಿ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್.1, 2025ರಂದು ನಡೆದಿರುವಂತ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪತಿ ಬೀರಪ್ಪ ಮಾಯಪ್ಪ ಪೂಜಾರಿ ಹತ್ಯೆಗೆ ಪತ್ನಿ ಸುನಂದಾ ಯತ್ನಿಸಿದ್ದಾರೆ. ಇಂಡಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಬೀರಪ್ಪ ಕುಟುಂಬ ವಾಸವಿತ್ತು. ಬೀರಪ್ಪ ಮೂಲತಹ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದವರಾಗಿದ್ದಾರೆ.

ಸಿದ್ದಪ್ಪ ಕ್ಯಾತಕೇರಿ ಜೊತೆಗೆ ಬೀರಪ್ಪ ಪತ್ನಿ ಸುನಂದಾ ಅನೈತಿಕ ಸಂಬಂಧ ಹೊಂದಿದ್ದರು. ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡವಾಗುತ್ತಿದ್ದಾನೆ ಎಂಬುದಾಗಿ ಬೀರಪ್ಪ ಹತ್ಯೆಗೆ ಪತ್ನಿ ಸುನಂದಾ ಪ್ರಿಯಕರನ ಜೊತೆಗೆ ಸೇರಿ ಪ್ಲಾನ್ ಮಾಡಿದ್ದರು.

ಸೆಪ್ಟೆಂಬರ್.1ರಂದು ಮನೆಗೆ ಬೀರಪ್ಪ ಹತ್ಯೆ ಮಾಡಲು ಪತ್ನಿ ಸುನಂದಾ ಪೂಜಾರಿ ಪ್ರಿಯಕರ ಸಿದ್ದಪ್ಪ ಹಾಗೂ ಮತ್ತೊಬ್ಬರನ್ನು ಕರೆಸಿಕೊಂಡಿದ್ದರು. ಪ್ರಿಯಕರ ಸಿದ್ದಪ್ಪ ಎಂಬಾತ ಬೀರಪ್ಪ ಪೂಜಾರಿ ಎದೆಮೇಲೆ ಕುಳಿತು ಹತ್ಯೆಗೆ ಯತ್ನಿಸಿದ್ದನು. ಈ ವೇಳೆ ಕೂಗಾಟ ಕೇಳಿದಂತ ಮನೆಯ ಮಾಲೀಕ ಎದ್ದು ಬಂದಿದ್ದರು.

ಮನೆಯ ಮಾಲೀಕರನ್ನು ಕಂಡು ಸುನಂದಾ ಪೂಜಾರಿ, ಪ್ರಿಯಕರ ಸಿದ್ದಪ್ಪ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರು. ಈ ಬಳಿಕ ಬೀರಪ್ಪ ಪತ್ನಿ ಸುನಂದಾ ಪೂಜಾರಿ, ಪ್ರಿಯಕರ ಸಿದ್ದಪ್ಪ ಹಾಗೂ ಮತ್ತೊಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.