ಬೆಂಗಳೂರು: ಬ್ಯಾಂಕ್ ಗಳಿಂದ ಲೆಕ್ಕಕೋರಿ ವಿಜಯ್ ಮಲ್ಯ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವೇಳೆಯಲ್ಲಿ ನೀವು ಕಂಪನಿ ಕೋರ್ಟ್ ಗೆ ಅರ್ಜಿ ಏಕೆ ಸಲ್ಲಿಸಿಲ್ಲ ಎಂಬುದಾಗಿ ವಿಜಯ್ ಮಲ್ಯ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿದೆ.
ಹಿರಿಯ ವಕೀಲ ಸಜನ್ ಪೂವಯ್ಯಗೆ ಹೈಕೋರ್ಟ್ ಪ್ರಶ್ನಿಸಿದೆ. ರಿಟ್ ಅರ್ಜಿಯಲ್ಲಿ ಲೆಕ್ಕಪತ್ರ ಹೇಗೆ ಕೇಳುತ್ತೀರೆಂದು ಪ್ರಶ್ನಿಸಿತು. ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿದೆ. ಬ್ಯಾಂಕಿನವರು ಒಂದು ಹೇಳುತ್ತಾರೆ. ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಯುಬಿಹೆಚ್ಎಲ್ ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ವಿಜಯ್ ಮಲ್ಯ ಅದರ ನಿರ್ದೇಶಕರಾಗಿದ್ದರು. ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸುವುದು ಸಾಂವಿಧಾನಿಕ ಹಕ್ಕು ಎಂಬುದಾಗಿ ಮಲ್ಯ ಪರವಾಗಿ ವಕೀಲ ಸಜನ್ ಪೂವಯ್ಯ ವಾದಿಸಿದರು.
ವಿಜಯ್ ಮಲ್ಯ ಅವರು 6,200 ಕೋಟಿ ಸಾಲ ಕೊಡಬೇಕಿತ್ತು. ಸದ್ಯ 14,000 ಕೋಟಿ ವಸೂಲಾಗಿದೆ. ಸಾಲ ವಸೂಲಾತಿ ಅಧಿಕಾರಿ ಹೇಳಿರೋದು 12,200 ಕೋಟಿ. ಸಂಪೂರ್ಣ ಸಾಲ ತೀರಿದ್ದರೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ ಎಂದು ನ್ಯಾಯಾಲಯದ ಮುಂದೆ ವಾದಿಸಿದರು.
ಈ ವೇಳೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಸೂಚನೆ ನೀಡಿದರು. ಬ್ಯಾಂಕುಗಳ ಪರ ವಕೀಲರಿಗೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಾಡಿದೆ.



