ಜಿಯೋ ಐಪಿಒ 17,000 ಕೋಟಿ ಅಮೆರಿಕನ್ ಡಾಲರ್ ವರೆಗೆ ಮೌಲ್ಯಮಾಪನ ನಿರೀಕ್ಷೆ- ಬ್ಲೂಮ್‌ಬರ್ಗ್

ನವದೆಹಲಿ: ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಮೌಲ್ಯಮಾಪನವು 170 ಬಿಲಿಯನ್ ಅಮೆರಿಕನ್ ಡಾಲರ್ ತಲುಪಬಹುದು. ಕಂಪನಿಯ ಸಂಭಾವ್ಯ ಮೌಲ್ಯಮಾಪನವು ಭಾರತದ ಅಗ್ರ ಎರಡು ಅಥವಾ ಮೂರು ದೊಡ್ಡ ಕಂಪನಿಗಳಲ್ಲಿ ಸ್ಥಾನ ಪಡೆಯಬಹುದು ಎಂದು ಹೂಡಿಕೆ ಬ್ಯಾಂಕರ್‌ಗಳು ನಂಬುತ್ತಾರೆ. ಈ ಅಂಕಿ ಅಂಶವು ಭಾರ್ತಿ ಏರ್‌ಟೆಲ್‌ನಂತಹ ಕಂಪನಿಗಳಿಗಿಂತಲೂ ಹೆಚ್ಚಾಗಿದೆ. ಏರ್‌ಟೆಲ್‌ನ ಸದ್ಯದ ಮೌಲ್ಯಮಾಪನವು ಸುಮಾರು 12.7 ಲಕ್ಷ ಕೋಟಿ ರೂಪಾಯಿ (143 ಬಿಲಿಯನ್ ಅಮೆರಿಕನ್ ಡಾಲರ್). ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಐಪಿಒ 2006ರ ನಂತರದಲ್ಲಿ ಪ್ರಮುಖ ರಿಲಯನ್ಸ್-ಸಂಯೋಜಿತ ಘಟಕದಿಂದ ಮೊದಲ ಸಾರ್ವಜನಿಕ ಆಫರ್ ಆಗಿದೆ. ರಿಲಯನ್ಸ್ ಪೆಟ್ರೋಲಿಯಂ ಅನ್ನು 2006ರಲ್ಲಿ ಲಿಸ್ಟಿಂಗ್ ಮಾಡಲಾಯಿತು.

ಬ್ಲೂಮ್‌ಬರ್ಗ್ ಪ್ರಕಾರ, ಹೂಡಿಕೆ ಬ್ಯಾಂಕರ್‌ಗಳು ಜಿಯೋಗೆ 130 ಬಿಲಿಯನ್ ನಿಂದ 170 ಬಿಲಿಯನ್ ಅಮೆರಿಕನ್ ಡಾಲರ್ ವರೆಗೆ ಮೌಲ್ಯಮಾಪನವನ್ನು ಪ್ರಸ್ತಾಪ ಮಾಡಿದ್ದಾರೆ. ಸದ್ಯಕ್ಕೆ ಚರ್ಚೆಗಳು ನಡೆಯುತ್ತಿದ್ದು, ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಇದಕ್ಕೂ ಮೊದಲು, ಸೆಪ್ಟೆಂಬರ್ 27 ರಂದು ದೇಶದ ಪ್ರಮುಖ ಬ್ರೋಕರೇಜ್ ಸಂಸ್ಥೆಯಾದ ಐಸಿಐಸಿಐ ಸೆಕ್ಯೂರಿಟೀಸ್ ನಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಈಕ್ವಿಟಿ ಮೌಲ್ಯವನ್ನು 148 ಬಿಲಿಯನ್‌ ಡಾಲರ್ ಗೆ ಮ ಮೇಲ್ದರ್ಜೆಗೆ ಏರಿಸಿತು.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಆಗಸ್ಟ್‌ನಲ್ಲಿ ಮಾತನಾಡುತ್ತಾ, ಜಿಯೋದ ಲಿಸ್ಟಿಂಗ್ 2026ರ ಮೊದಲಾರ್ಧದಲ್ಲಿ ಆಗಬಹುದು ಎಂದು ಹೇಳಿದ್ದಾರೆ. ಅಂಬಾನಿ ಅವರು 2019 ರಿಂದಲೂ ಸಂಭಾವ್ಯ ಜಿಯೋ ಐಪಿಒ ಬಗ್ಗೆ ಮಾತನಾಡುತ್ತಿದ್ದಾರೆ. 2020 ರಲ್ಲಿ ಮೆಟಾ ಪ್ಲಾಟ್‌ಫಾರ್ಮ್ಸ್ (ಫೇಸ್‌ಬುಕ್) ಮತ್ತು ಆಲ್ಫಾಬೆಟ್ (ಗೂಗಲ್) ನಂತಹ ಕಂಪನಿಗಳು ಜಿಯೋದಲ್ಲಿ 10 ಬಿಲಿಯನ್‌ ಡಾಲರ್ ಗಿಂತ ಹೆಚ್ಚು ಹೂಡಿಕೆ ಮಾಡಿವೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಿಯೋ ಸುಮಾರು 50.6 ಕೋಟಿ ಚಂದಾದಾರರನ್ನು ಹೊಂದಿತ್ತು ಮತ್ತು ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ರೂ. 211.4 ಆಗಿತ್ತು.