ಏಷ್ಯನ್ ಗೇಮ್ಸ್ 2026: ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ! Mirabai Chanu

ಜಪಾನ್: ಭಾರತದ ತಾರೆ ವೈಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಅವರು ಏಷ್ಯನ್ ಗೇಮ್ಸ್ 2026ರ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಪಾನ್‌ನ ನಗೋಯಾ ಸಿಟಿ ಟ್ರೇಡ್ ಮತ್ತು ಇಂಡಸ್ಟ್ರಿ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಾನು ಈ ಸ್ಮರಣೀಯ ಗೆಲುವು ಸಾಧಿಸಿದ್ದಾರೆ.

28 ವರ್ಷಗಳ ಕಾಯುವಿಕೆಗೆ ತೆರೆ

ಈ ಬೆಳ್ಳಿ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲಬೇಕೆಂಬ ಮೀರಾಬಾಯಿ ಅವರ ಬಹುದಿನಗಳ ಕನಸು ನನಸಾಗಿದೆ. ಜೊತೆಗೆ ಏಷ್ಯನ್ ಗೇಮ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕಿದ್ದ 28 ವರ್ಷಗಳ ಪದಕದ ಬರವನ್ನು ಅವರು ಕೊನೆಗೊಳಿಸಿದ್ದಾರೆ. 1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಬೆಳ್ಳಿ ಪದಕ ಗೆದ್ದ ನಂತರ ಭಾರತಕ್ಕೆ ಈ ವಿಭಾಗದಲ್ಲಿ ಬಂದ ಮೊದಲ ಪದಕ ಇದಾಗಿದೆ.

ಉತ್ತಮ ಪ್ರದರ್ಶನ

ಮೀರಾಬಾಯಿ ಚಾನು ಒಟ್ಟು 198 ಕೆಜಿ ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದರು.

  • ಸ್ನ್ಯಾಚ್ (Snatch): 87 ಕೆಜಿ

  • ಕ್ಲೀನ್ ಅಂಡ್ ಜರ್ಕ್ (Clean and Jerk): 111 ಕೆಜಿ

ಉತ್ತರ ಕೊರಿಯಾದ ರಿ ಸಾಂಗ್ ಗಮ್ ಒಟ್ಟು 215 ಕೆಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಇಂಡೋನೇಷ್ಯಾದ ಲುಲುಕ್ ಡಯಾನಾ ತ್ರಿ ವಿಜಯಾನಾ (191 ಕೆಜಿ) ಕಂಸ ಪದಕ ಗೆದ್ದರು.

ಕರ್ಣಂ ಮಲ್ಲೇಶ್ವರಿ ಸಾಲಿಗೆ ಸೇರಿದ ಮೀರಾಬಾಯಿ

ಈ ಪದಕದೊಂದಿಗೆ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗಳಲ್ಲೆಲ್ಲಾ ಪದಕ ಗೆದ್ದ ಭಾರತದ ಎರಡನೇ ವೈಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಕರ್ಣಂ ಮಲ್ಲೇಶ್ವರಿ ಮಾತ್ರ ಈ ಅಪರೂಪದ ಸಾಧನೆ ಮಾಡಿದ್ದರು