ಬೆಸ್ಕಾಂ ಗ್ರಾಹಕರೇ ಗಮನಿಸಿ: ವಿದ್ಯುತ್‌ ಸಂಬಂಧಿತ ದೂರುಗಳಿಗೆ ವಾಟ್ಸ್‌ ಆಪ್‌ ಸಂಖ್ಯೆ ಬಳಸಿ

ಬೆಂಗಳೂರು: ವಿದ್ಯುತ್‌ ಪೂರೈಕೆ ಸೇರಿದಂತೆ ವಿದ್ಯುತ್‌ ಸಂಬಂಧಿತ ದೂರುಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ ಸಂಬಂಧಿಸಿದಂತೆ 11 ವಾಟ್ಸ್‌ ಆಪ್‌ ಸಹಾಯವಾಣಿ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಲು ಬೆಸ್ಕಾಂ ಮನವಿಮಾಡಿದೆ.

ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಕರೆಗಳ ಒತ್ತಡದಿಂದಾಗಿ ಕೆಲವೊಮ್ಮೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಹಕರು ಬೆಸ್ಕಾಂನ 11 ವಾಟ್ಸ್‌ ಆಪ್‌ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶ ಕಳುಹಿಸುವ ಮೂಲಕ ವಿದ್ಯುತ್‌ ಸಂಬಂಧಿತ ದೂರುಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ವಾಟ್ಸ್‌ ಪ್‌ ಸಹಾಯವಾಣಿ ವಿವರ

ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ : 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ-:8277884013, ಉತ್ತರ ವೃತ್ತ :8277884014.

ಕೋಲಾರ ಜಿಲ್ಲೆ : 8277884015, ಚಿಕ್ಕಬಳ್ಳಾಪುರ ಜಿಲ್ಲೆ : 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ : 8277884019, ಚಿತ್ರದರ್ಗ ಜಿಲ್ಲೆ : 8277884020, ದಾವಣಗೆರೆ ಜಿಲ್ಲೆ : 8277884021

ಗ್ರಾಹಕರು ವಾಟ್ಸ್‌ ಆಪ್‌ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶದ ಜೊತೆಗೆ ವಿದ್ಯುತ್‌ ಸಂಬಂಧಿತ ದೂರಗಳ ಪೋಟೋ ಹಾಗೂ ವಿಡಿಯೋಗಳನ್ನು ಸಹ ಕಳುಹಿಸಬಹುದಾಗಿದೆ. ಗ್ರಾಹಕರು ತಮ್ಮ ಪ್ರದೇಶದ ವ್ಯಾಪ್ತಿಗೆ ಸಂಬಂಧಿತ ವಾಟ್ಸ್‌ಪ್‌ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ನೀಡಿದರೆ ಅವುಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು.