ವಿಜಯನಗರ: ಹಂಪಿಗೆ ಪ್ರವಾಸಕ್ಕೆ ತೆರಳಿದ್ದಂತ ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಓರ್ವ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಹೊಸಪೇಟೆಯ ಕೊಟ್ಟೂರಿನ ಕುಟುಂಬದ ನಾಲ್ವರು ಹಂಪಿಗೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಚಂದ್ರಪ್ಪ(43) ಎಂಬುವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಆತ್ಮಹತ್ಯೆ ಯತ್ನದಲ್ಲಿ ಚಂದ್ರಪ್ಪ ಅವರ ಪತ್ನಿ ಸೌಮ್ಯ(38), ಪುತ್ರಿ ಭವಾನಿ(12) ಹಾಗೂ ಪುತ್ರ ಶಿವು(10) ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂದಹಾಗೇ ಚಂದ್ರಪ್ಪ ಹಾಗೂ ಪತ್ನಿ, ಮಕ್ಕಳು ಹಂಪಿ ಕಮಲಾಪುರ ಸಮೀಪದ ದೇವಸ್ಥಾನದ ಬಳಿಯಲ್ಲಿ ವಿಷ ಸೇವಿಸಿದ್ದಾರೆ. ಈ ಆತ್ಮಹತ್ಯೆ ಯತ್ನದ ಹಿಂದೆ ಚಂದ್ರಪ್ಪ ಸಾಲ ಮಾಡಿಕೊಂಡಿದ್ದ ಶಂಕೆ ವ್ಯಕ್ತವಾಗಿದೆ.




