ಬೆಂಗಳೂರು: ಅಹಮದಾಬಾದಿನ ಮೋದಿ ಕ್ರೀಢಾಂಗಣದಲ್ಲಿ ನಡೆದಂತ ಐಪಿಎಲ್-2025ರ ಫೈನಲ್ ಪಂದ್ಯಾವಳಿಯಲ್ಲಿ ಆರ್ ಸಿ ಬಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಬಳಿಕ ಬೆಂಗಳೂರಲ್ಲಿ ಸರ್ಕಾರದಿಂದ ನಿಗದಿ ಪಡಿಸಲಾಗಿರುವಂತ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಇಂತಹ ಆರ್ ಸಿ ಬಿ ಆಟಗಾರರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಅಹಮದಾಬಾದ್ ನಿಂದ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಆಗಮಿಸಿದಂತ ಆರ್ ಸಿ ಬಿ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದಂತ ಫೈನಲ್ ಪಂದ್ಯದಲ್ಲಿ 18 ವರ್ಷಗಳ ಬಳಿಕ ಆರ್ ಸಿ ಬಿ ಗೆಲುವು ಕಂಡಿತ್ತು. ಹೀಗಾಗಿ ರಾಜ್ಯ ಸರ್ಕಾರ ತಂಡದ ಆಟಗಾರರಿಗೆ ಸನ್ಮಾನಿಸಿ, ಅಭಿನಂದಿಸುವಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ವಿಧಾನಸೌಧದ ಬೃಹತ್ ಮೆಟ್ಟಿಲಿನ ಮೇಲೆ ಸಂಜೆ 4 ಗಂಟೆಗೆ ಆರ್ ಸಿ ಬಿ ತಂಡದ ಎಲ್ಲಾ ಆಟಗಾರರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸನ್ಮಾನಿಸಿ, ಅಭಿನಂದಿಸಲಿದ್ದಾರೆ.




