ಫ್ಲೋರಿಡಾದಲ್ಲಿ ಖಾಸಗಿ ಜೆಟ್ ವಿಮಾನ ಪತನ; 9 ಮಂದಿ ಸಾವು

ಫ್ಲೋರಿಡಾ: ಅಮೆರಿಕದ ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಗ್ರೀನ್‌ಏಕರ್ಸ್ ಪ್ರದೇಶದಲ್ಲಿ ಖಾಸಗಿ ಜೆಟ್ ವಿಮಾನ ಪತನಗೊಂಡು ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಟೆಕ್ಸಾಸ್‌ನಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಲಿಯರ್‌ಜೆಟ್ 60 ವಿಮಾನ ಭಾನುವಾರ ಮಧ್ಯಾಹ್ನ 12.50ರ ಸುಮಾರಿಗೆ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ವಿಮಾನದಲ್ಲಿದ್ದ ಎಲ್ಲ ಒಂಬತ್ತು ಮಂದಿ ಮೃತಪಟ್ಟಿರುವುದಾಗಿ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.

ಪತನಕ್ಕೂ ಮುನ್ನ ಹವಾಮಾನ ವೈಪರೀತ್ಯ, ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹ ಹಾಗೂ ತೀವ್ರ ಪ್ರಕ್ಷುಬ್ಧತೆಯಿಂದ ನಿಯಂತ್ರಣಕ್ಕೆ ತೊಂದರೆಯಾಗಿತ್ತು ಎನ್ನಲಾಗಿದೆ. ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ ಮೇಡೇ ಕರೆ ನೀಡಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಪ್ರದೇಶಗಳಿಂದ 600 ಜನರನ್ನು ಸ್ಥಳಾಂತರಿಸಲಾಗಿದೆ. ನೆಲದ ಮೇಲಿದ್ದ ಯಾರಿಗೂ ಗಾಯವಾಗಿಲ್ಲ ಎಂದು ಫ್ಲೋರಿಡಾ ಗವರ್ನರ್ ತಿಳಿಸಿದ್ದಾರೆ.