ಬೆಂಗಳೂರಲ್ಲಿ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಕಾರ್ಯಾಚರಣೆ: ಹೀಗಿದೆ ವೇಳಾಪಟ್ಟಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿ.ಎಂ.ಆರ್.ಸಿ.ಎಲ್)  ದಿನಾಂಕ 10ನೇ ಸೆಪ್ಟೆಂಬರ್ 2025 ರಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆ ಸೇರಿಸಲಾಗಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪರಿಷ್ಕರಿಸ ಲಾಗಿದೆ:

ರೈಲು ಆವರ್ತನ:

ಎಲ್ಲಾ ದಿನಗಳಲ್ಲಿ ರೈಲುಗಳು ಈಗ 19 ನಿಮಿಷಗಳ ಮಧ್ಯಂತರದಲ್ಲಿ (ಈಗಿನ 25 ನಿಮಿಷಗಳ ಮಧ್ಯಂತರದ ಬದಲಿಗೆ) ಚಲಿಸುತ್ತವೆ.

ಮೊದಲ ರೈಲು ಸಮಯ:

  • ಸೋಮವಾರದಿಂದ ಶನಿವಾರದಂದು, ಮೊದಲ ವಾಣಿಜ್ಯ ಸೇವೆಯು ಬೆಳಿಗ್ಗೆ ಈಗಿನ 6.30 ಗಂಟೆಯ ಬದಲಿಗೆ ಬೆಳಿಗ್ಗೆ 06:00 ಗಂಟೆಗೆ ಪ್ರಾರಂಭವಾಗುತ್ತದೆ.
  • ಭಾನುವಾರದಂದು, ಮೊದಲ ರೈಲು ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗಲಿದೆ.

ಕೊನೆಯ ರೈಲು ಸಮಯ:

  • ಆರ್.ವಿ. ರಸ್ತೆಯಿಂದ: ರಾತ್ರಿ 11:55 (ಬದಲಾವಣೆ ಇಲ್ಲ)
  • ಬೊಮ್ಮಸಂದ್ರದಿಂದ: ರಾತ್ರಿ 10:42 (ಬದಲಾವಣೆ ಇಲ್ಲ)

ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸುಧಾರಿತ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.