ಖೇಲ್ ರತ್ನ ಪ್ರಶಸ್ತಿ ಪ್ರಕಟ: ಮನು ಭಾಕರ್, ಗುಕೇಶ್ ಸೇರಿ ನಾಲ್ವರು ಆಯ್ಕೆ | Khel Ratna award

ನವದೆಹಲಿ: ಶೂಟರ್ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ ಗುಕೇಶ್, ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರನ್ನು ಈ ವರ್ಷದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

22 ವರ್ಷದ ಭಾಕರ್ ಆಗಸ್ಟ್ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅದೇ ಕ್ರೀಡಾಕೂಟದಲ್ಲಿ, ಹಮ್ರನ್ಪ್ರೀತ್ ಭಾರತೀಯ ಹಾಕಿ ತಂಡವನ್ನು ಸತತ ಎರಡನೇ ಕಂಚಿನ ಪದಕಕ್ಕೆ ಮುನ್ನಡೆಸಿದರು.

ಮತ್ತೊಂದೆಡೆ, 18 ವರ್ಷದ ಗುಕೇಶ್, ಕಳೆದ ವರ್ಷ ಚೆಸ್ ಒಲಿಂಪಿಯಾಡ್ನಲ್ಲಿ ಐತಿಹಾಸಿಕ ಚಿನ್ನ ಗೆಲ್ಲಲು ಭಾರತೀಯ ತಂಡಕ್ಕೆ ಸಹಾಯ ಮಾಡುವ ಮೂಲಕ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಟಿ 64 ಚಾಂಪಿಯನ್ ಕಿರೀಟ ಧರಿಸಿದ ಪ್ಯಾರಾ ಹೈಜಂಪರ್ ಪ್ರವೀಣ್ ನಾಲ್ಕನೇ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟಿ 64 ವರ್ಗೀಕರಣವು ಮೊಣಕಾಲಿನ ಕೆಳಗೆ ಒಂದು ಅಥವಾ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಮತ್ತು ಓಡಲು ಪ್ರಾಸ್ಥೆಟಿಕ್ ಕಾಲನ್ನು ಅವಲಂಬಿಸಿರುವ ಕ್ರೀಡಾಪಟುಗಳಿಗೆ.

“ಪ್ರಶಸ್ತಿ ವಿಜೇತರು 2025 ರ ಜನವರಿ 17 ರಂದು (ಶುಕ್ರವಾರ) ಬೆಳಿಗ್ಗೆ 1100 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ” ಎಂದು ಕ್ರೀಡಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.