ಬೆಳಗಾವಿ: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಎಂಬಾತ ಪಡೆದಿದ್ದಂತ ಲಕ್ಷ ಲಕ್ಷ ಹಣವನ್ನು ವಾಪಾಸ್ ಕೊಡು ಅಂತ ಕೇಳಿದ್ದಕ್ಕೆ, ಗುತ್ತಿಗೆದಾರರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಚಲಿಸುತ್ತಿದ್ದಂತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯಲ್ಲಿ ಸಚಿನ್ ಎಂಬ ಗುತ್ತಿಗೆದಾರ ಚಲಿಸುತ್ತಿದ್ದಂತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನಾ ಸುಮಾರು 7 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಎಂಬಾತ ಟೆಂಡರ್ ಕೊಡಿಸುವುದಾಗಿ ಲಕ್ಷ ಲಕ್ಷ ಹಣ ಪಡೆದು, ಆ ಬಳಿಕ 1 ಕೋಟಿಗೆ ಡಿಮ್ಯಾಂಡ್ ಮಾಡಿ ಕೊಡಿಸದೇ ಮೋಸ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
1 ಕೋಟಿ ಹಣ ಕೊಡದ ಕಾರಣಕ್ಕೆ ಟೆಂಡರ್ ನೀಡದೇ ವಂಚಿಸಿದ್ದಾರೆ. ನಾನು ನೀಡಿದಂತ ಲಕ್ಷಾಂತರ ಹಣವನ್ನು ವಾಪಾಸ್ಸು ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರೋದಾಗಿ ಹೇಳಲಾಗುತ್ತಿದೆ.




