ರಾಜ್ಯದಲ್ಲಿ ಹೆಚ್ಚಾದ HMPV ವೈರಸ್ ಆತಂಕ: ಶಿವಮೊಗ್ಗದಲ್ಲಿ 6 ಮಕ್ಕಳಿಗೆ ಸೋಂಕು ದೃಢ

ಶಿವಮೊಗ್ಗ: ರಾಜ್ಯದಲ್ಲಿ ಹೆಚ್ ಎಂ ಪಿ ವಿ ವೈರಸ್ ಆತಂಕ ಹೆಚ್ಚಾಗಿದೆ. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಆರು ಮಕ್ಕಳಿಗೆ ಹೆಚ್ ಎಂ ಪಿ ವಿ ವೈರಸ್ ಸೋಂಕು ದೃಢಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಸರ್ಜಿ ಆಸ್ಪತ್ರೆಯ ಮಾಲೀಕ ಹಾಗೂ ಎಂಎಲ್ಸಿ ಡಾ.ಧನಂಜಯ ಸರ್ಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದು, ಸರ್ಜಿ ಆಸ್ಪತ್ರೆಗೆ 1 ರಿಂದ 2 ವರ್ಷದೊಳಗಿನ 6 ಮಕ್ಕಳು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ದಾಖಲಾಗಿದ್ದವು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದಿದ್ದಾರೆ.

ಕೊರೋನಾ ವೈರಸ್ ಮುನ್ಸೂಚನೆಯ ಹಿನ್ನಲೆಯಲ್ಲಿ ಮಕ್ಕಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಈ ಪರೀಕ್ಷೆಯಲ್ಲಿ ಆರು ಮಕ್ಕಳಿಗೆ ಹೆಚ್ ಎಂ ಪಿ ವಿ ವೈರಸ್ ಸೋಂಕು ದೃಢಪಟ್ಟಿದೆ. ಮಕ್ಕಳಿಗೆ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಯಾರಿಗೂ ಆತಂಕ ಬೇಡ, ಹೆಚ್ ಎಂ ಪಿ ವಿ ವೈರಸ್ ಮಾರಣಾಂತಿಕವಲ್ಲ ಎಂಬುದಾಗಿ ಹೇಳಿದರು.