BMTC ಬಸ್ ಪಾಸ್ ದರ ಹೆಚ್ಚಳ: ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಸುಗಳ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಆದೇಶಿಸಿತ್ತು. ಈ ಬೆನ್ನಲ್ಲೇ ಬಿಎಂಟಿಸಿಯಿಂದ ಬಸ್ ಪಾಸ್ ದರಗಳನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ಬೆಂಗಳೂರು ಜನತೆಗೆ ಬಿಗ್ ಶಾಕ್ ನೀಡಲಾಗಿದೆ.

ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಸಾಮಾನ್ಯ ದೈನಿಕ ಪಾಸು ರೂ.70 ಇದ್ದದ್ದನ್ನು ರೂ.80ಕ್ಕೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸಾಪ್ತಾಹಿಕ ವಾರದ ಪಾಸು ದರ ರೂ.300ರಿಂದ ರೂ.350ಕ್ಕೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

ಇನ್ನೂ ಹಿರಿಯ ನಾಗರೀಕರ ಸಾಮಾನ್ಯ ಮಾಸಿಕ ಪಾಸು ದರ ರೂ.945 ಇದ್ದದ್ದನ್ನು ರೂ.1080ಕ್ಕೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಮಾಸಿಕ ಪಾಸು ದರ ರೂ.1050ರಿಂದ ರೂ.1200ಕ್ಕೆ ಹೆಚ್ಚಳವಾಗಿದೆ. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸು ಟೋಲ್ ಶುಲ್ಕ ಒಳಗೊಂಡಂತೆ ರೂ.2200 ರಿಂದ ರೂ.2350ಕ್ಕೆ ಏರಿಕೆ ಮಾಡಲಾಗಿದೆ.

ಇದಲ್ಲದೇ ವಾಯು ವಜ್ರ ಬಸ್ ಪಾಸ್ ದರಗಳನ್ನು ಪರಿಷ್ಕರಿಸಲಾಗಿದೆ. ಜಿಎಸ್ ಟಿ ದರ ಸಹಿತ ಮಾಸಿ, ಸಾಪ್ತಾಹಿಕ ಬಸ್ ಪಾಸ್ ದರವನ್ನು ಬಿಎಂಟಿಸಿ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಸಿಲಿಕಾನ್ ಸಿಟಿ ಜನರಿಗೆ ಶಾಕ್ ನೀಡಲಾಗಿದೆ.