ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತಂದಂತ ಆರೋಪದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಆರು ತಿಂಗಳುಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದಾರೆ.
ಇಂದು ವಿಧಾನಸಭೆಯ ಕಲಾಪ ಮಧ್ಯಾಹ್ನ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಿಂದ ಗಲಾಟೆ, ಕೋಲಾಹಲ ಏಳಿಸಲಾಯಿತು. ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ.
ಹೀಗಿದೆ ವಿಧಾನಸಭೆ ಕಲಾಪದಿಂದ 6 ತಿಂಗಳುಗಳ ಕಾಲ ಅಮಾನತುಗೊಂಡ 18 ಬಿಜೆಪಿ ಶಾಸಕರ ಪಟ್ಟಿ
- ದೊಡ್ಡನಗೌಡ ಪಾಟೀಲ್
- ಡಾ.ಸಿಎನ್ ಅಶ್ವತ್ಥನಾರಾಯಣ
- ಡಾ.ಭರತ್ ಶೆಟ್ಟಿ
- ಶರಣು ಸಲಗರ
- ಬಿ ಸುರೇಶ್ ಗೌಡ
- ಮುನಿರತ್ನ
- ಚನ್ನಬಸಪ್ಪ
- ಉಮಾನಾಥ್ ಕೋಟ್ಯಾನ್
- ಬಿ.ಪಿ ಹರೀಶ್
- ಧೀರಜ್ ಮುನಿರಾಜು
- ಯಶವಂತ
- ಬಸವರಾಜ ಮತ್ತಿಮೂಡ
- ಚಂದ್ರು ಲಮಾಣಿ
- ರಾಮಮೂರ್ತಿ
- ಯಶವತ್ ಸುವರ್ಣಾ
- ಶೈಲೇಂದ್ರ ಬೆಲ್ದಾಳೆ
- ಭೈರತಿ ಬಸವರಾಜ
- ಎಸ್ ಆರ್ ವಿಶ್ವನಾಥ್
ಸ್ಪೀಕರ್ ಪೀಠದಲ್ಲಿ ಕುಳಿತಂತ ಯು.ಟಿ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೇ ಸ್ಪೀಕರ್ ಪೀಠಕ್ಕೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಆದೇಶದ ಸಂದರ್ಭದಲ್ಲಿ ಹೇಳಿದ್ದಾರೆ.




