ಚಿಕ್ಕಬಳ್ಳಾಪುರ: ಅಶ್ವತ್ಥನಾರಾಯಣಸ್ವಾಮಿ ಅಪಹರಣ ಕೇಸ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಿದ್ದಂತ ಮೋಸ್ಟ್ ವಾಂಟೆಂಡ್ ಕಿಡ್ನಾಪರ್ಸ್ ಬಾಂಬೆ ಸಲೀಂ ಸೇರಿದಂತೆ 7 ಆರೋಪಿಗಳನ್ನು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಠಾಣೆಯ ಪೊಲೀಸರು ಕೇರಳದಲ್ಲಿ ಮೋಸ್ಟ್ ವಾಂಟೆಂಡ್ ಕಿಡ್ನಾಪರ್ಸ್ ಬಾಂಬೆ ಸಲೀಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಂಬೆ ಸಲೀಂ, ಅನಿಲ್ ಚೇತನ್, ನಾಗೇಶ್, ಬಾಗೇಪಲ್ಲಿ ಚೇತನ್, ಬಾಬು ರೆಡ್ಡಿ, ಸಲೀಂ ಹಾಗೂ ಅಸ್ಲಾಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಅಶ್ವತ್ಥನಾರಾಯಣಸ್ವಾಮಿ ಕಿಡ್ನಾಪ್ ಮಾಡಿದ್ದಂತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




