15 ಸಾವಿರ ಲಂಚ ಸ್ವೀಕರಿಸುವಾಗ ಹಾವೇರಿ ಬಿಇಒ ಲೋಕಾಯುಕ್ತ ಬಲೆಗೆ

ಹಾವೇರಿ: 15,000 ಲಂಚ ಸ್ವೀಕರಿಸುವಾಗ ಹಾವೇರಿ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ರೆಡ್ ಹ್ಯಾಂಡ್ ಹಿಡಿದಿದ್ದಾರೆ.

ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ್ ಎಂಬುವರು ಶಿಕ್ಷಕ ಪ್ರತಾಪ್ ಬಾರ್ಕಿ ಎಂಬುವರಿಗೆ ಬಾಕಿ ವೇತನ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಿಕ್ಷಕ ಪ್ರತಾಪ್ ಬಾರ್ಕಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇಂದು ಹಾವೇರಿಯಲ್ಲಿನ ಬಸವೇಶ್ವರನಗರದ 13ನೇ ಕ್ರಾಸ್ ನಲ್ಲಿರುವಂತ ಬಿಇಒ ಮೌನೇಶ್ ಬಡಿಗೇರ್ ಮನೆಯಲ್ಲಿ 15,000 ಲಂಚ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಿಇಒ ಮೌನೇಶ್ ಬಿರಾದಾರ್, ಶಿಕ್ಷಕ ಮಲ್ಲಿಕಾರ್ಜನ ಕಂಬಾರಗೇರಿ ಹಾಗೂ ಬಿಇಒ ವಾಹನ ಚಾಲಕ ಪಾಪು ಪೊಮಪ್ಪ ಉದಾಯತ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.