ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿಗಾಗಿ ಲೈನ್ ಬ್ಲಾಕ್ ಲಭ್ಯವಿಲ್ಲದ ಕಾರಣ, ಈ ಹಿಂದೆ ಮರುನಿಗದಿಪಡಿಸಲಾದ, ನಿಯಂತ್ರಿಸಲಾದ ಹಾಗೂ ಭಾಗಶಃ ರದ್ದುಗೊಳಿಸಲಾದ ಕೆಳಗಿನ ರೈಲು ಸೇವೆಗಳು ಎಂದಿನಂತೆ ಅದೇ ಮಾರ್ಗ ಮತ್ತು ಸಮಯದಲ್ಲಿ ಪುನರಾರಂಭ ಆಗಲಿವೆ:
ರೈಲು ಸಂಖ್ಯೆ. 66579 ಕೆ.ಎಸ್.ಆರ್. ಬೆಂಗಳೂರು – ಅಶೋಕಪುರಂ ಮೆಮೂ ಮತ್ತು ರೈಲು ಸಂಖ್ಯೆ. 66554 ಅಶೋಕಪುರಂ – ಕೆ.ಎಸ್.ಆರ್. ಬೆಂಗಳೂರು ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಈ ಹಿಂದೆ ಭಾಗಶಃ ರದ್ದುಗೊಳಿಸಲಾಗಿತ್ತು, ಈಗ ಅದೇ ಮಾರ್ಗದಲ್ಲಿ ಮತ್ತು ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.
ರೈಲು ಸಂಖ್ಯೆ. 16552 ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸಪ್ರೆಸ್, ಈ ಹಿಂದೆ ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 40 ನಿಮಿಷಗಳ ಮರುನಿಗದಿಪಡಿಸಲಾಗಿತ್ತು, ಈಗ ಈ ರೈಲು ಅಶೋಕಪುರಂನಿಂದ 29 ಮತ್ತು 31 ಅಕ್ಟೋಬರ್ 2025 ರಂದು ಮಾತ್ರ 40 ನಿಮಿಷಗಳ ಮರುನಿಗದಿಯೊಂದಿಗೆ ಸಂಚರಿಸುತ್ತದೆ.
ರೈಲು ಸಂಖ್ಯೆ. 16586 ಮುರ್ಡೇಶ್ವರ – ಕೆ.ಎಸ್.ಆರ್. ಬೆಂಗಳೂರು ಎಕ್ಸಪ್ರೆಸ್ ಮತ್ತು ರೈಲು ಸಂಖ್ಯೆ. 06270 ಎಸ್.ಎಂ.ವಿ.ಟಿ. ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲು, ಈ ಹಿಂದೆ 28, 30 ಅಕ್ಟೋಬರ್, 18, 20, 25, 27 ನವೆಂಬರ್ ಮತ್ತು 16, 18 ಡಿಸೆಂಬರ್ 2025 ರಂದು ನಿಯಂತ್ರಿಸಲಾಗಿತ್ತು, ಇದೀಗ ಇವುಗಳು ಅದೇ ಮಾರ್ಗದಲ್ಲಿ ಮತ್ತು ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.




