ಮುಂಬೈ : ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸುಧಾರಿತ ಕಂಪ್ಯೂಟಿಂಗ್ ಅನ್ನು ಹೆಚ್ಚು ಸುಲಭವಾಗಿ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ಜಿಯೋಪಿಸಿ (JioPC) ಮೂಲಕ ಜಿಯೋ(Jio) ಇನ್ನಷ್ಟು ಬಲಪಡಿಸಿದೆ. ಜಿಯೋಪಿಸಿ ಒಂದು “ಕಂಪ್ಯೂಟರ್-ಆ್ಯಸ್-ಎ-ಸಬ್‌ಸ್ಕ್ರಿಪ್ಶನ್” ಸೇವೆ ಆಗಿದ್ದು, ಹೊಸ ಕಂಪ್ಯೂಟರ್‌ಗೆ(Computer) ಹಣ ಹೂಡದೆಯೇ ಶಕ್ತಿಶಾಲಿ, ಕ್ಲೌಡ್ ಆಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸುತ್ತದೆ.
ಜಿಯೋಪಿಸಿ ಬಳಕೆದಾರರಿಗೆ ಕ್ಲೌಡ್ ಮೂಲಕ ಆಧುನಿಕ ಕಂಪ್ಯೂಟಿಂಗ್ ಪರಿಸರವನ್ನು ಬಳಸಲು ಅವಕಾಶ ನೀಡುತ್ತದೆ ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ಇದನ್ನು ಕಾನ್ಫಿಗರ್ ಮಾಡಬಹುದು. ಇದು ಈಗಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನ ಆಯುಷ್ಯವನ್ನು ಹೆಚ್ಚಿಸಬಹುದು, ಜಿಯೋ ಸೆಟ್-ಟಾಪ್ ಬಾಕ್ಸ್ ಮೂಲಕ ಮಾನಿಟರ್ ಅನ್ನು ಪಿಸಿಯಾಗಿ (ಪರ್ಸನಲ್ ಕಂಪ್ಯೂಟರ್) ಪರಿವರ್ತಿಸಬಹುದು, ಅಥವಾ ವೆಬ್ ಬ್ರೌಸರ್ ಮೂಲಕ ಸಂಪೂರ್ಣ ಕಂಪ್ಯೂಟಿಂಗ್ ಪರಿಸರಕ್ಕೆ ಪ್ರವೇಶ ಒದಗಿಸಬಹುದು.
ಇದು ಕಂಪ್ಯೂಟಿಂಗ್ ಅನುಭವವನ್ನು ಭೌತಿಕ ಸಾಧನದಿಂದ ಬೇರ್ಪಡಿಸುವುದರಿಂದ, ಬಳಕೆದಾರರು ತಮ್ಮ ಜಿಯೋಪಿಸಿ ಪರಿಸರವನ್ನು ವಿವಿಧ ಸ್ಕ್ರೀನ್ ಗಳು ಮತ್ತು ಸಾಧನಗಳಲ್ಲಿ ಬಳಸಬಹುದು. ಜಿಯೋಪಿಸಿ ಯಾವುದೇ ನಿರ್ದಿಷ್ಟ ಸಾಧನಕ್ಕೆ ಸೀಮಿತವಲ್ಲದ ಕಾರಣ, ಬೇರೆ ಬೇರೆ ಸ್ಥಳಗಳು ಅಥವಾ ಸಾಧನಗಳನ್ನು ಬಳಸುವ ವಿದ್ಯಾರ್ಥಿಗಳು ಮತ್ತು ಇತರ ಬಳಕೆದಾರರಿಗೆ ಇದು ಅನುಕೂಲಕರವಾಗಿದೆ. ಖಾತೆಯನ್ನು ಈಗಿರುವ ಕಂಪ್ಯೂಟರ್, ಜಿಯೋ ಸೆಟ್-ಟಾಪ್ ಬಾಕ್ಸ್‌ಗೆ ಸಂಪರ್ಕಿಸಿದ ಟೆಲಿವಿಷನ್ ಅಥವಾ ಬೇರೊಂದು ಮಾನಿಟರ್‌ನಿಂದ ಪ್ರವೇಶಿಸಬಹುದು.
ಮುಖ್ಯವಾಗಿ, ಜಿಯೋಪಿಸಿ ಕೇವಲ ಜಿಯೋ ಬಳಕೆದಾರರಿಗೆ ಮಾತ್ರ ಸೀಮಿತವಲ್ಲ. ಜಿಯೋ ಅಲ್ಲದ ಬಳಕೆದಾರರು ಸಕ್ರಿಯ ಜಿಯೋಪಿಸಿ ಸಬ್ ಸ್ಕ್ರಿಪ್ಷನ್ ಹೊಂದಿದ್ದರೆ, ಯಾವುದೇ ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸಂಪರ್ಕದ ಮೂಲಕ ಬ್ರೌಸರ್‌ನಲ್ಲಿ ಜಿಯೋಪಿಸಿ ಬಳಸಬಹುದು.
ವಿದ್ಯಾರ್ಥಿಗಳಿಗೆ, ಹೈಬ್ರಿಡ್ ತರಗತಿಗಳು ಮತ್ತು ಶೈಕ್ಷಣಿಕ ಅಪ್ಲಿಕೇಷನ್‌ಗಳಿಂದ ಹಿಡಿದು ಕೋಡಿಂಗ್, ವಿನ್ಯಾಸ, ಸಂಶೋಧನೆ ಮತ್ತು ಜನರೇಟಿವ್ ಎಐ ವರೆಗಿನ ಎಲ್ಲದಕ್ಕೂ ಬೇಕಾದ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಜಿಯೋಪಿಸಿ ಒದಗಿಸಬಲ್ಲದು. ಶೈಕ್ಷಣಿಕ ಕೆಲಸದ ಹೊರೆ ಹೆಚ್ಚೆಚ್ಚು ತಂತ್ರಜ್ಞಾನ-ಕೇಂದ್ರಿತವಾಗುತ್ತಿರುವಾಗ, ಈಗಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಅನ್ನು ಬದಲಾಯಿಸದೆಯೇ ಹೆಚ್ಚುವರಿ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಪಡೆಯಲು ಜಿಯೋಪಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ.
ಈ ಸೇವೆಯನ್ನು ಕಾನ್ಫಿಗರ್ ಮಾಡಬಹುದಾದ ಕಂಪ್ಯೂಟಿಂಗ್ ಮಾದರಿಯ ಆಧಾರದ ಮೇಲೆ ರೂಪಿಸಲಾಗಿದ್ದು, ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೊಡ್ಡ ಮೊತ್ತದ ಮುಂಗಡ ಹೂಡಿಕೆ ಮಾಡುವ ಬದಲು, ಬಳಕೆದಾರರು ಚಂದಾ ಆಧಾರಿತ ಯೋಜನೆಗಳ ಮೂಲಕ ವಿಶ್ವಾಸಾರ್ಹ ಕ್ಲೌಡ್ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಪಡೆಯಬಹುದು. ಈ “ಬಳಸಿದಷ್ಟು ಪಾವತಿಸಿ” ವಿಧಾನವು ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಹೆಚ್ಚಿನ ಹೊಂದಾಣಿಕೆಯನ್ನು ನೀಡುತ್ತದೆ.
ಮಾನ್ಯತೆ ಅವಧಿ — JioPC (8GB RAM / 500GB ಸ್ಟೋರೇಜ್) — JioPC Ultra (16GB RAM / 1TB ಸ್ಟೋರೇಜ್)
2 ತಿಂಗಳು — ₹1,000 — ₹1,200
5 ತಿಂಗಳು —₹2,000 — ₹2,500
10+2 ತಿಂಗಳು — ₹4,000 — ₹5,000
ಜಿಯೋಹೋಮ್ ಗ್ರಾಹಕರಿಗೆ ಈ ಕೊಡುಗೆಯೊಂದಿಗೆ ಹೆಚ್ಚುವರಿ ಪ್ರಯೋಜನವೂ ಇದೆ. ತಿಂಗಳಿಗೆ ₹100 ಮೌಲ್ಯದ ಜಿಯೋ ಹೋಮ್ ವೋಚರ್ ಅನ್ನು ಬ್ರಾಡ್‌ಬ್ಯಾಂಡ್ ಬಿಲ್‌ಗೆ ಬಳಸಿಕೊಳ್ಳಬಹುದು, ಇದರಿಂದ ಅರ್ಹ ಬಳಕೆದಾರರಿಗೆ ಜಿಯೋಪಿಸಿ ಮಾಸಿಕ ವೆಚ್ಚ ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.
ಜಿಯೋಪಿಸಿ ಉಬುಂಟು (ಲಿನಕ್ಸ್) ಇಂಟರ್ಫೇಸ್, ಲಿಬ್ರೆ ಆಫೀಸ್ ಮತ್ತು ಮೈಕ್ರೋಸಾಫ್ಟ್ 365 ನಂತಹ ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ಬಳಸಲು ವೆಬ್ ಬ್ರೌಸರ್‌ಗಳೊಂದಿಗೆ ಬರುತ್ತದೆ. ಇದು ಅಡೋಬ್ ಎಕ್ಸ್‌ಪ್ರೆಸ್‌ನಂತಹ ಸಾಧನಗಳನ್ನೂ ಬೆಂಬಲಿಸುತ್ತದೆ. ಫೈಲ್‌ಗಳನ್ನು ಸಾಧನದಲ್ಲೇ ಸಂಗ್ರಹಿಸುವ ಸಾಂಪ್ರದಾಯಿಕ ಪಿಸಿಯಂತಲ್ಲದೆ, ಜಿಯೋಪಿಸಿ ಡೇಟಾವನ್ನು ವಿಪತ್ತು ಚೇತರಿಕೆ (ಡಿಸಾಸ್ಟರ್ ರಿಕವರಿ) ವ್ಯವಸ್ಥೆಯುಳ್ಳ ಎಂಟರ್‌ಪ್ರೈಸ್-ದರ್ಜೆಯ ಕ್ಲೌಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸುತ್ತದೆ.
ಹೆಚ್ಚು ತಿಳಿಯಲು ಅಥವಾ ಸಬ್ ಸ್ಕ್ರಿಪ್ಷನ್ ಗಾಗಿ ಭೇಟಿ ನೀಡಿ: https://www.jio.com/jiopc/pwa/




