ನ್ಯೂಯಾರ್ಕ್: ಶಾಂತಿ ಮಾತುಕತೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಾಂಕೇತಿಕವಾಗಿರದೆ ಅರ್ಥಪೂರ್ಣವಾಗಿರಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ. ಮಹಿಳೆಯರ ನಾಯಕತ್ವದಿಂದ ಶಾಶ್ವತ ಶಾಂತಿ ಸ್ಥಾಪನೆ ಸಾಧ್ಯ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನಡೆದ 57 ಶಾಂತಿ ಪ್ರಕ್ರಿಯೆಗಳಲ್ಲಿ ಮಹಿಳಾ ಸಂಧಾನಕಾರರ ಪಾಲು ಕೇವಲ ಶೇ.5ರಷ್ಟಿತ್ತು. ಶಾಂತಿ ಒಪ್ಪಂದಗಳ ಐದನೇ ಒಂದು ಭಾಗಕ್ಕಿಂತ ಕಡಿಮೆ ಒಪ್ಪಂದಗಳಲ್ಲಿ ಮಹಿಳೆಯರ ಉಲ್ಲೇಖವಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಹಿಳಾ, ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ನಿರ್ಣಯಗಳ ಅನುಷ್ಠಾನ ವಿಳಂಬ ಸ್ವೀಕಾರಾರ್ಹವಲ್ಲ ಎಂದಿರುವ ಗುಟೆರಸ್, ಶಾಂತಿ ಒಪ್ಪಂದಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘರ್ಷ ಪೀಡಿತ ಪ್ರದೇಶಗಳ ಮಹಿಳಾ ಸಂಘಟನೆಗಳಿಗೆ ಅನುದಾನ ಹೆಚ್ಚಿಸುವುದು, ಮಹಿಳಾ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವುದು ಹಾಗೂ ಲಿಂಗಾಧಾರಿತ ಹಿಂಸಾಚಾರ ತಡೆಯಲು ಕಾನೂನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
“ಸಮಾನತೆ ಕನಸಲ್ಲ, ಅದೊಂದು ನಿರ್ಧಾರ,” ಎಂದು ತಿಳಿಸಿರುವ ಅವರು, ರಾಜಕೀಯ ನಿರ್ಧಾರಗಳು ಮತ್ತು ನೀತಿ ರೂಪಿಸುವಿಕೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವಂತೆ ಕರೆ ನೀಡಿದ್ದಾರೆ.
The importance of women’s participation in peace processes is not symbolic.
They are more likely to endure when women participate meaningfully.
Stability is more achievable when women have equal opportunity to shape the future.
And societies are stronger & more resilient when women & girls can live free from fear & violence.
My remarks to the Security Council: https://t.co/hceIH02isD
— António Guterres (@antonioguterres) October 28, 2026



