ಹೈದರಾಬಾದ್ : ತೆಲುಗು ನಟ ಸಂದೀಪ್ ಕಿಶನ್ ನಾಯಕನಾಗಿ ಅಭಿನಯಿಸುತ್ತಿರುವ ಕೃಷ್ಣ ಚೈತನ್ಯ ನಿರ್ದೇಶನದ ‘ಪವರ್ ಪೇಟ’ ಚಿತ್ರದ ನಾಯಕಿ ರಿತಿಕಾ ನಾಯಕ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಿತಿಕಾ ನಾಯಕ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡವು ‘ಪದಮಟವೀಧಿ ಜಾನಕಿ’ ಪಾತ್ರವನ್ನು ಪರಿಚಯಿಸಿದೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ರಿತಿಕಾ ನಾಯಕ್ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ. ನಟ ಸಂದೀಪ್ ಕಿಶನ್ ಅವರು ರಿತಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದು, ಚಿತ್ರದ ಕುರಿತ ಕುತೂಹಲವನ್ನು ಹೆಚ್ಚಿಸಿದ್ದಾರೆ.
‘ಪವರ್ ಪೇಟ’ ಚಿತ್ರದಲ್ಲಿ ಸಂದೀಪ್ ಕಿಶನ್ ಅವರು ‘ಸೇನಾಪತಿ ರವಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀತಿ, ಗೌರವ ಮತ್ತು ರಾಜಕೀಯದ ಸುತ್ತ ಕಥೆ ಸಾಗುವ ಸುಳಿವನ್ನು ಚಿತ್ರತಂಡ ನೀಡಿದೆ. ಸದ್ಯ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದ್ದು, ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

‘ಮಿರಾಯ್’ ಮತ್ತು ‘ಕೊರಿಯನ್ ಕನಕರಾಜು’ ಚಿತ್ರಗಳ ಬಳಿಕ ರಿತಿಕಾ ನಾಯಕ್ ಅವರಿಗೆ ‘ಪವರ್ ಪೇಟ’ ಮತ್ತೊಂದು ಪ್ರಮುಖ ಸಿನಿಮಾವಾಗಿದೆ. ಕೃಷ್ಣ ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.
70ಎಂಎಂ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಾಧಿ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದು, ಮಣಿ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಶ್ರೀಕರ್ ಪ್ರಸಾದ್ ಸಂಕಲನ ಮಾಡುತ್ತಿದ್ದು, ರಾಮಕೃಷ್ಣ ಮತ್ತು ಮೋನಿಕಾ ನಿರ್ಮಾಣ ವಿನ್ಯಾಸದ ಹೊಣೆ ಹೊತ್ತಿದ್ದಾರೆ.



