ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಸ್ನಾನ ಘಟ್ಟದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯವನ್ನು ಎಸ್ಐಟಿ ಚುರುಕುಗೊಳಿಸಿದೆ. ಇಂದು ಬಂಗ್ಲೆಗುಡ್ಡ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಹಲವು ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ 11ನೇ ಪಾಯಿಂಟ್ ನಲ್ಲಿ ಇಂದು ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯನಡೆಸಬೇಕಿತ್ತು. ಆದರೇ ದೂರುದಾರ ಕಾಡಿನಲ್ಲಿ ಶವಗಳಿರುವ ಬಗ್ಗೆ ಮಾಹಿತಿ ನೀಡಿದ್ದರಿಂತ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಟೀಂ ಹುಡುಕಾಟದಲ್ಲಿ ತೊಡಗಿತ್ತು.
ಬಂಗ್ಲೆಗುಡ್ಡಕ್ಕೆ ಸುಮಾರು ಮೂರು ಉಪ್ಪು ಮೂಟೆಗಳನ್ನು ಕಾರ್ಮಿಕರ ಮೂಲಕ ಕೊಂಡೊಯ್ಯಲಾಗಿತ್ತು. ಹೀಗಾಗಿ ಬಂಗ್ಲೆಗುಡ್ಡ ಪ್ರದೇಶದಲ್ಲಿ ಹಲವು ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವುದಾಗಿ ಎಸ್ಐಟಿ ಮೂಲಗಳು ಖಚಿತಪಡಿಸಿವೆ. ಈ ಮೂಲಕ ತನಿಖೆಗೆ ಮಹತ್ತರ ತಿರುವನ್ನು ಭೀಮ ನೀಡದ್ದಾನೆ.




