ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟ ಶುರುವಾಗಿದೆ. ಇಂದು ಪರೀಕ್ಷೆ ಮಾಡಿದಂತ ಮಾದರಿಯಲ್ಲಿ ಐವರಿಗೆ ಕೋವಿಡ್ ಪಾಸಿಟಿವ್ (Covid Positive) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಕೋರೋನಾ ಸೋಂಕಿತ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರು ನಗರದಲ್ಲಿ 92 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದರೇ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದಿದೆ.
ಇನ್ನೂ ಮೈಸೂರಿನಲ್ಲಿ ಮೂವರು ಕೋವಿಡ್ ಪರೀಕ್ಷೆಗೆ (Covid19 Test) ಒಳಪಡಿಸಲಾಗಿದ್ದು, ಇಬ್ಬರಿಗೆ ಪಾಸಿಟಿವ್ ಬಂದಿದೆ. ವಿಜಯನಗರದಲ್ಲಿ ಒಬ್ಬರಿಗೆ ಸೇರಿದಂತೆ ರಾಜ್ಯಾಧ್ಯಂತ ಐವರಿಗೆ ಕೊರೋನಾ ಪಾಸಿಟಿವ್ (Corona Positive) ಅಂತ ವರದಿಯಿಂದ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.



