ಗುಂಪು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಭರ್ಜರಿ ಗುಡ್ ನ್ಯೂಸ್: ಬಲ್ಕ್ ಟಿಕೆಟ್ ಬುಕಿಂಗ್ ನಿಯಮ ಇನ್ನಷ್ಟು ಸರಳ! Group Booking

Great news from South Western Railways for group travelers Bulk ticket booking rules made even simpler

ನವದೆಹಲಿ: ನೈಋತ್ಯ ರೈಲ್ವೆಯು(South Western Railways) ಈ ವಿಷಯಕ್ಕೆ ಸಂಬಂಧಿಸಿದ ಹಿಂದಿನ ಎಲ್ಲಾ ಮಾರ್ಗಸೂಚಿಗಳನ್ನು ರದ್ದುಗೊಳಿಸಿ, ಕಮರ್ಷಿಯಲ್ ಸರ್ಕ್ಯುಲರ್ (ಕೋಚಿಂಗ್) ಸಂಖ್ಯೆ 37/2026 / 11 ರೇಟ್ ಅಡ್ವೈಸ್ ಸಂಖ್ಯೆ 11 (2026) ರ ಮೂಲಕ ಕಾಯ್ದಿರಿಸಿದ ಟಿಕೆಟ್ಗಳ ‘ಬೃಹತ್/ಗುಂಪು ಬುಕಿಂಗ್’ (Bulk/Group Booking) ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, ‘ಮುಂಗಡ ಕಾಯ್ದಿರಿಸುವ ಅವಧಿ’ (Advance Reservation Period) ಪ್ರಾರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 09:00 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್ಗೆ ಅವಕಾಶವಿರುತ್ತದೆ. ಮದುವೆ ಸಮಾರಂಭಗಳಿಗೆ ಹೋಗುವವರು, ವಿದ್ಯಾರ್ಥಿಗಳು, ಯಾತ್ರಿಕರು, ಕ್ರೀಡಾ ತಂಡಗಳು ಮತ್ತು ಸಾಂಸ್ಕೃತಿಕ ಗುಂಪುಗಳಂತಹ ನೈಜ (ನಿರ್ದಿಷ್ಟ) ಉದ್ದೇಶಗಳಿಗಾಗಿ ಒಟ್ಟಿಗೆ ಪ್ರಯಾಣಿಸುವ ಅಧಿಕೃತ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ಟಿಕೆಟ್ಗಳು ಖಚಿತಗೊಂಡಿರಲಿ (Confirmed), ಆರ್ಎಸಿ (RAC)
ನೈಋತ್ಯ ರೈಲ್ವೆಯಿಂದ ಗುಂಪು ಬುಕಿಂಗ್(Group Booking) ನಿಯಮಗಳ ಸರಳೀಕರಣ

ನೈಋತ್ಯ ರೈಲ್ವೆಯು, ಈ ವಿಷಯಕ್ಕೆ ಸಂಬಂಧಿಸಿದ ಹಿಂದಿನ ಎಲ್ಲಾ ಮಾರ್ಗಸೂಚಿಗಳನ್ನು ರದ್ದುಗೊಳಿಸಿ, ಕಮರ್ಷಿಯಲ್ ಸರ್ಕ್ಯುಲರ್ (ಕೋಚಿಂಗ್) ಸಂಖ್ಯೆ 37/2026 / 11 ರೇಟ್ ಅಡ್ವೈಸ್ ಸಂಖ್ಯೆ 11 (2026) ರ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳ ‘ಬೃಹತ್/ಗುಂಪು ಬುಕಿಂಗ್’ (Bulk/Group Booking) ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, ‘ಮುಂಗಡ ಕಾಯ್ದಿರಿಸುವ ಅವಧಿ’ (Advance Reservation Period) ಪ್ರಾರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 09:00 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್‌ಗೆ ಅವಕಾಶವಿರುತ್ತದೆ. ಮದುವೆ ಸಮಾರಂಭಗಳಿಗೆ ಹೋಗುವವರು, ವಿದ್ಯಾರ್ಥಿಗಳು, ಯಾತ್ರಿಕರು, ಕ್ರೀಡಾ ತಂಡಗಳು ಮತ್ತು ಸಾಂಸ್ಕೃತಿಕ ಗುಂಪುಗಳಂತಹ ನೈಜ (ನಿರ್ದಿಷ್ಟ) ಉದ್ದೇಶಗಳಿಗಾಗಿ ಪ್ರಯಾಣಿಸುವ ಅಧಿಕೃತ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ಟಿಕೆಟ್‌ಗಳು ಖಚಿತಗೊಂಡಿರಲಿ (Confirmed), ಆರ್‌ಎಸಿ (RAC) ಆಗಿರಲಿ ಅಥವಾ ಕಾಯುವ ಪಟ್ಟಿಯಲ್ಲಿರಲಿ (Waitlisted) – ಎಲ್ಲಾ ದರ್ಜೆಗಳಿಗೂ (ವರ್ಗಗಳಿಗೂ) ಇದು ಅನ್ವಯಿಸುತ್ತದೆ.

ಪ್ರಮುಖ ಸಡಿಲಿಕೆಯಾಗಿ, ಗುಂಪು ಕಾಯ್ದಿರಿಸುವಿಕೆಯ (Bulk Reservation) ಅಡಿಯಲ್ಲಿ ಅನುಮತಿಸಲಾದ ಬರ್ತ್‌ಗಳ ಸಂಖ್ಯೆಯ ಮೇಲೆ ಇನ್ನು ಮುಂದೆ ಯಾವುದೇ ಗರಿಷ್ಠ ಮಿತಿ (ceiling) ಇರುವುದಿಲ್ಲ. ಈ ಹಿಂದೆ ಇದ್ದ ನಿಯಮ ಹಾಗೂ ನಿಗದಿತ ಮಿತಿಗಳನ್ನು ಹಿಂಪಡೆಯಲಾಗಿದೆ. ಈಗ, ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (CRS – Chief Reservation Supervisor) ಅಥವಾ ನಿಲ್ದಾಣ ವ್ಯವಸ್ಥಾಪಕರು (SM – Station Manager) ಗುಂಪು ಕಾಯ್ದಿರಿಸುವಿಕೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ.

ಈ ಮೇಲೆ ಹೇಳಿದಂತೆ, ಅರ್ಜಿದಾರರು ತಮ್ಮ ಅರ್ಜಿಗಳನ್ನು ನೇರವಾಗಿ ಸಂಬಂಧಪಟ್ಟವರಿಗೆ ಸಲ್ಲಿಸಬೇಕು. ವಿದೇಶಿ ಪ್ರವಾಸಿಗರು ಅಥವಾ ಅನಿವಾಸಿ ಭಾರತೀಯರ (NRIs) ಪರವಾಗಿ ಮಾಡುವ ಬುಕಿಂಗ್‌ಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಸಂದರ್ಭಗಳಲ್ಲಿ ಟ್ರಾವೆಲ್ ಏಜೆಂಟ್‌ಗಳ ಮೂಲಕ ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಪ್ರಯಾಣದ ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸದಿದ್ದರೆ ಅನುಮತಿ ನೀಡಲಾಗುವುದಿಲ್ಲ. ಅಲ್ಲದೆ, ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಎಲ್ಲಾ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ವಿಳಾಸ ಮತ್ತು ಪ್ರಯಾಣದ ಉದ್ದೇಶವನ್ನು ಒದಗಿಸುವುದು ಕಡ್ಡಾಯವಾಗಿದೆ.

ಹಿಂದಿರುಗುವ ಪ್ರಯಾಣಕ್ಕೂ ಸಹ ಅದೇ ಕಾಯ್ದಿರಿಸುವಿಕೆ ಕಚೇರಿಯಲ್ಲಿ ಗುಂಪು ಬುಕಿಂಗ್‌ಗೆ ಅನುಮತಿ ಪಡೆಯಬಹುದು; ಆದರೆ ಇದನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಲಾಗುತ್ತದೆ. ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು / ನಿಲ್ದಾಣದ ವ್ಯವಸ್ಥಾಪಕರು ಅನುಮತಿ ನೀಡಲಾದ ಎಲ್ಲಾ ಗುಂಪು ಬುಕಿಂಗ್‌ಗಳ ಪ್ರತ್ಯೇಕ ದಾಖಲೆ ಪುಸ್ತಕವನ್ನು ನಿರ್ವಹಿಸಬೇಕು, ಅರ್ಜಿ ನಮೂನೆ ಮತ್ತು ಪ್ರಯಾಣಿಕರ ಪಟ್ಟಿಯ ಪ್ರತಿ ಪುಟದ ಮೇಲೆ ತಮ್ಮ ಮೊಹರು ಮತ್ತು ಸಹಿಯನ್ನು ಹಾಕಬೇಕು. ಈ ಸೌಲಭ್ಯವು ಅಕ್ರಮ ಗುಂಪುಗಳು ಬರ್ತ್/ಆಸನಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಕಡಿವಾಣ ಹಾಕಿ, ನೈಜ ಗುಂಪು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಿದೆ.