ಬೆಂಗಳೂರು: ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ ಎಂಬುದಾಗಿ ತನ್ನ ಖಾತೆಯನ್ನು ತೋರಿಸುವ ಮೂಲಕ, ಹೊಸ ವೀಡಿಯೋವನ್ನು ಯೂಟ್ಯೂಬರ್ ಸಮೀರ್.ಎಂ.ಡಿ ಬಿಡುಗಡೆ ಮಾಡಿದ್ದಾರೆ.
ಯೂಟ್ಯೂಬರ್ ಸಮೀರ್ ಎಂ.ಡಿ ಇದೀಗ ಇನ್ಸ್ ಟಾಗ್ರಾಮ್ ನಲ್ಲಿ ಹೊಸ ವೀಡೀಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ. ಬ್ಯಾಂಕ್ ದಾಖಲೆ ತೋರಿಸಿ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಎಸ್ಐಟಿ ವಿಚಾರಣೆ ಬಳಿಕ ಸಮೀರ್ ಮೊದಲ ಮಾತು ಇದಾಗಿದೆ. ವೀಡಿಯೋದಲ್ಲಿ ನನಗೆ ಇಸ್ಲಾಂ ದೇಶಗಳಿಂದ, ಟೆರರಿಸ್ಟ್ ನಿಂದ ಕೋಟ್ಯಂತರ ಹಣ ಬಂದಿದೆ ಎಂಬುದಾಗಿ ಆರೋಪಿಸಲಾಗಿದೆ. ಆದರೇ ನಾನು ಮುಸ್ಲೀಂ ಆಗಿರುವ ಕಾರಣ ಈ ರೀತಿಯ ಆರೋಪ ಮಾಡಲಾಗುತ್ತಿದೆ. ಆದರೇ ನನ್ನ ಬ್ಯಾಂಕ್ ಖಾತೆಗೆ ಆ ರೀತಿಯ ಯಾವುದೇ ಹಣ ಬಂದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ನಾನು ಸೌಜನ್ಯ ಪರವಾಗಿ ನಿಂತಾಗಿನಿಂದ ಇಂತಹ ಆರೋಪಗಳನ್ನು ಎದುರಿಸುತ್ತಿದ್ದೇನೆ. ಒಂದು ಸಾವಿಗೆ ನ್ಯಾಯ ಕೊಡಿಸೋದಕ್ಕೆ ನಿಂತ ನಾನು ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ನನ್ನ ಬ್ಯಾಂಕ್ ಖಾತೆಯ ಎಲ್ಲಾ ವಿವರವನ್ನು ಪೊಲೀಸರಿಗೆ ನೀಡಿದ್ದೇನೆ. ನನ್ನ ಎಲ್ಲಾ ದಾಖಲೆಗಳು ಪೊಲೀಸರ ಬಳಿಯಲ್ಲಿದ್ದಾವೆ. ಒಂದು ವೇಳೆ ವಿದೇಶದಿಂದ ಹಣ ಬಂದಿದ್ದರೇ ಇಷ್ಟರ ವೇಳೆಗೆ ಹೊರಗೆ ಬರ್ತಾ ಇರಲಿಲ್ಲವೇ ಎಂಬುದಾಗಿ ಪ್ರಶ್ನಿಸಿದ್ದಾರೆ.



