ಜೆರುಸಲೇಂ: ಇರಾನ್ನಿಂದ ಹೆಚ್ಚುತ್ತಿರುವ ಬೆದರಿಕೆ ಎದುರಿಸಲು ಇಸ್ರೇಲ್ನಲ್ಲಿ ರಾಷ್ಟ್ರೀಯ ಏಕತಾ ಸರ್ಕಾರ ರಚನೆಯಾಗಬೇಕು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ನೀಡಿದ್ದಾರೆ. ಇರಾನ್ನ ಆಡಳಿತ ಇಸ್ರೇಲ್ ಅಸ್ತಿತ್ವಕ್ಕೆ ಬೆದರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆದರೆ, ನೆತನ್ಯಾಹು ಭಾಷಣವನ್ನು ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.

ಇಸ್ರೇಲ್ನ 120 ಸದಸ್ಯರ ನೆಸೆಟ್ನಲ್ಲಿ ಸರ್ಕಾರ ರಚಿಸಲು 61 ಸಂಸದರ ಬೆಂಬಲ ಅಗತ್ಯವಿದೆ. ಆದರೆ, ನೆತನ್ಯಾಹು ಮತ್ತು ಐಸೆನ್ಕೋಟ್ ಬಣಗಳಿಗೆ ಇನ್ನೂ ಬಹುಮತ ದೊರೆತಿಲ್ಲ.
2023ರ ಅಕ್ಟೋಬರ್ 7ರ ಹಮಾಸ್ ದಾಳಿಗೂ ಮುನ್ನ ನಡೆದ ಭದ್ರತಾ ವೈಫಲ್ಯಗಳ ತನಿಖೆಗೆ ಸ್ವತಂತ್ರ ಆಯೋಗ ರಚಿಸಬೇಕು ಎಂದು ಐಸೆನ್ಕೋಟ್ ಆಗ್ರಹಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ನೆತನ್ಯಾಹು, ಆಯೋಗದ ಸದಸ್ಯರನ್ನು ರಾಜಕೀಯ ಪ್ರಕ್ರಿಯೆ ಮೂಲಕ ಆಯ್ಕೆ ಮಾಡುವಂತೆ ಪ್ರಸ್ತಾಪಿಸಿದ್ದಾರೆ. ಈ ನಡುವೆ ಸರ್ಕಾರ ರಚನೆಗೆ ರಾಜಕೀಯ ಬಣಗಳ ಬೆಂಬಲ ಕ್ರೋಡೀಕರಣದ ಪ್ರಯತ್ನಗಳು ನಡೆಯುತ್ತಿವೆ.



