ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಸೋಮವಾರ ಅಧಿಕಾರದಿಂದ ಕೆಳಗಿಳಿಯಲು ಉದ್ದೇಶಿಸಿದ್ದಾರೆ. ಆದರೆ ಆಡಳಿತಾರೂಢ ಲಿಬರಲ್ ಪಕ್ಷವು ಅವರ ಬದಲಿಯನ್ನು ಆಯ್ಕೆ ಮಾಡುವವರೆಗೂ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ಹೇಳಿದರು.
“ನಾನು ಪಕ್ಷದ ಆಂತರಿಕ ಹೋರಾಟಗಳನ್ನು ಎದುರಿಸಬೇಕಾದರೆ, ಮುಂದಿನ ಚುನಾವಣೆಯಲ್ಲಿ ನಾನು ಉತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ” ಎಂದು ಟ್ರುಡೊ ಹೇಳಿದರು.
ಟ್ರುಡೊ ಲೈವ್ ಭಾಷಣದಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದರು. ಈ ಮೂಲಕ ಕೆನಡಾ ಪ್ರಧಾನಿ ಹುದ್ದೆಗೆ, ಲಿಬರಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು.




