ಬೆಳಗಾವಿ ಸುವರ್ಣಸೌಧ : ವಿಧಾನಸಭೆಯಿಂದ ಅಂಗಿಕೃತ ರೂಪದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವು ಡಿ.18 ರಂದು ವಿಧಾನ ಪರಿಷತ್ತಿನಲ್ಲಿ ಅಂಗೀಕೃತವಾಯಿತು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾoಕ ಖರ್ಗೆ ವಿಧೇಯಕವನ್ನು ಅಂಗೀಕರಿಸುವಂತೆ ಕೋರಿದರು.
ಪ್ರಸ್ತಾವದ ಕುರಿತಂತೆ ವಿಧಾನ ಪರಿಷತ್ತಿನ ಸದಸ್ಯರಾದ ಶರವಣ, ಸಿ. ಟಿ. ರವಿ, ತಳವಾರ ಸಾಬಣ್ಣ, ಶಶಿಲ್ ನಮೋಶಿ, ನವೀನ್, ಎಸ್.ವಿ.ಸಂಕನೂರು, ಐವನ್ ಡಿಸೋಜ, ಪ್ರತಾಪ್ ಸಿಂಹ ನಾಯಕ್, ರವಿಕುಮಾರ್,ಬಲ್ಕಿಸ್ ಭಾನು, ಕೇಶವ ಪ್ರಸಾದ್,ಪುಟ್ಟಣ್ಣ, ಹನುಮಂತ ನಿರಾಣಿ,ಚಿದಾನಂದ ಗೌಡ, ಗೋವಿಂದ ರಾಜು, ನಾಗರಾಜ್, ಅರುಣ್, ತಿಪ್ಪೇಸ್ವಾಮಿ, ಪೂಜಾರ್ ಮಾತನಾಡಿದರು.
ವಿಶ್ವ ವಿದ್ಯಾಲಯದ ಆಡಳಿತ ವ್ಯವಸ್ಥೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಯುವಕರಿಗೆ ಗುಣಮಟ್ಟದ ಶಿಕ್ಷಣ, ಸಂಶೋಧನೆ, ಆವಿಷ್ಕಾರ, ಉದ್ಯಮಶೀಲತೆಯ ಉದ್ದೇಶದಿಂದ ಹಾಗೂ ಈ ವಿಶ್ವ ವಿದ್ಯಾಲಯವನ್ನು ಇಡೀ ರಾಷ್ಟ್ರಕ್ಕೆ ಮಾದರಿಯನ್ನಾಗಿ ರೂಪಿಸಲು ತಂದಿರುವ ಈ ತಿದ್ದುಪಡಿಯನ್ನು ಅಂಗೀಕರಿಸಲು ಅನುಮೋದಿಸುವಂತೆ ಸಚಿವರು ಕೋರಿದರು.
ವಿಧೇಯಕದ ಕುರಿತು ವಿರೋಧ ಪಕ್ಷಗಳು ಧ್ವನಿಮತದ ಮೂಲಕ ಆಕ್ಷೇಪ ವ್ಯಕಪಡಿಸಿದ್ದು, ನಂತರ ನಡೆದ ಸದಸ್ಯರ ಹಾಜರಿ ಎಣಿಕೆ ಯಲ್ಲಿ 26/25 ರಲ್ಲಿ ವಿಧೇಯಕವನ್ನು ಬಹುಮತದೊಂದಿಗೆ ಅಂಗೀಕರಿಸಲಾಯಿತು.




