ಬೆಳಗಾವಿ: ಜಿಲ್ಲೆಯಲ್ಲಿ 4 ವರ್ಷದ ಅಪ್ರಾಪ್ತ ಬಾಲಕಿಯನ್ನು ಚಾಕೋಲೇಟ್ ಕೊಡಿಸುವ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದಂತ ಆರೋಪಿಗೆ ಕೋರ್ಟ್ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.
ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದಂತ ಬೆಳಗಾವಿ ಪೋಕ್ಸೋ ಕೋರ್ಟ್ ನ್ಯಾಯಮೂರ್ತಿ ಸಿಎಂ ಪುಷ್ಪಲತಾ ಅವರು ಕೃತ್ಯ ನಡೆದಂತ ಒಂದೇ ವರ್ಷದಲ್ಲಿ ಈ ಮಹತ್ವದ ತೀರ್ಪು ನೀಡಿದ್ದಾರೆ.
ಅಂದಹಾಗೇ 4 ವರ್ಷದ ಬಾಲಕಿಯನ್ನು ಚಾಕೋಲೇಟ್ ಕೊಡಿಸುವಂತ ಆಸೆ ತೋರಿಸಿ ಆರೋಪಿ ನಿಸಾರ್ ಅಹ್ಮದ್ ಫಕ್ರುಸಾಬ್ ಎಂಬಾತ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ಈ ಸಂಬಂಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಆರೋಪಿ ನಿಸಾರ್ ಅಹ್ಮದ್ ಫಕ್ರುಸಾಬ್ ಅನ್ನು ಬಂಧಿಸಿದ್ದಂತ ಪೊಲೀಸರು, ಆತನ ವಿರುದ್ಧ 2 ತಿಂಗಳಲ್ಲೇ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಫೆಬ್ರವರಿ 27, 2024ರಲ್ಲಿ ನಡೆದಿದ್ದಂತ ಅತ್ಯಾಚಾರ ಪ್ರಕರಣದ ಆರೋಪಿಗೆ, ಇಂದು ಕೋರ್ಟ್ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.




