ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ: ಶಿವಮೊಗ್ಗ ನಿವಾಸಿ ಮಂಜುನಾಥ್ ಸಾವು

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದಂತ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವನ್ನಪ್ಪಿದ್ದಾರೆ.

ಇಂದು ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದ್ದರು. ಹಲವು ಪ್ರವಾಸಿಗರು ಗಾಯಗೊಂಡು, ಐವರು ಸಾವನ್ನಪ್ಪಿದ್ದಾರೆ. ಅವರಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಎಂಬುವರು ಸೇರಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಮಂಜುನಾಥ್ ಪತ್ನಿ ಪಲ್ಲವಿ, ನನ್ನ ಪತಿಯನ್ನು ಕೊಂದು ಹಾಕಿದೆಯಲ್ಲ ನನ್ನನ್ನು, ನನ್ನ ಮಗನನ್ನೂ ಕೊಲ್ಲುವಂತೆ ಹೇಳಿದ್ದೆ. ಉಗ್ರನಿಗೆ ತಮ್ಮನ್ನು ಕೊಲ್ಲುವಂತೆ ಕೇಳಿಕೊಂಡಿದ್ದೆ ಎಂದರು.

ನಮ್ಮನ್ನು ಸಾಯಿಸಲು ಉಗ್ರ ಮುಂದಾಗಲಿಲ್ಲ. ನೀನು ಹೋಗಿ ಮೋದಿಗೆ ನಿನ್ನ ಗಂಡನನ್ನು ಸಾಯಿಸಿದ ಬಗ್ಗೆ ಹೇಳು ಅಂತ ಹೇಳಿದ್ದಾಗಿ ತಿಳಿಸಿದರು.

ನನಗೊಂದು ಫ್ಲೈಟ್ ಅರೆಂಜ್ ಮಾಡಿಕೊಂಡಿ. ಪತಿಯ ಮೃತದೇಹವನ್ನು ಶಿವಮೊಗ್ಗಕ್ಕೆ ರವಾನಿಸಲು ಅವಕಾಶ ಮಾಡಿಕೊಡುವಂತೆ ಕಣ್ಣೀರಿಡುತ್ತಲೇ ಮೃತ ಮಂಜುನಾಥ್ ಪತ್ನಿ ಪಲ್ಲವಿ ಮನವಿ ಮಾಡದರು.