ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 814 ಉಪನ್ಯಾಸಕರ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟ

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಈ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದೆ.

ಉದ್ದೇಶಿತ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದದ (NKK) 778 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ (KK – 371J) 36 ಹುದ್ದೆಗಳು ಸೇರಿವೆ. ಅಲ್ಲದೆ, 9 ಮತ್ತು 10ನೇ ತರಗತಿಗಳಿಗೆ ಪದವಿ ಪೂರ್ವ ಉಪನ್ಯಾಸಕರಿಂದ ಬೋಧನಾ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸೇವಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ತಂದು ಈ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲು ಕೆಇಎಗೆ ಸೂಚಿಸಲಾಗಿದೆ.

ವಿಷಯವಾರೂ ಹುದ್ದೆಗಳ ವಿವರ:

ಕ್ರ.ಸಂ.ವಿಷಯ (Subject)ಉಳಿಕೆ ಮೂಲ ವೃಂದ (NKK)ಕಲ್ಯಾಣ ಕರ್ನಾಟಕ (KK)ಒಟ್ಟು ಹುದ್ದೆಗಳು
1ಕನ್ನಡ (Kannada)84589
2ಇಂಗ್ಲಿಷ್ (English)1405145
3ಇತಿಹಾಸ (History)45550
4ಅರ್ಥಶಾಸ್ತ್ರ (Economics)85590
5ರಾಜ್ಯಶಾಸ್ತ್ರ (Political Science)20525
6ಸಮಾಜಶಾಸ್ತ್ರ (Sociology)20525
7ಭೂಗೋಳಶಾಸ್ತ್ರ (Geography)10010
8ವಾಣಿಜ್ಯಶಾಸ್ತ್ರ (Commerce – Bst + Acc)1464150
9ಭೌತಶಾಸ್ತ್ರ (Physics)30030
10ರಸಾಯನಶಾಸ್ತ್ರ (Chemistry)30030
11ಗಣಿತ (Mathematics)30030
12ಜೀವಶಾಸ್ತ್ರ (Biology)30030
13ಗಣಕಯಂತ್ರ ವಿಜ್ಞಾನ (Computer Science)1082110
ಒಟ್ಟು77836814

ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪದವಿ ಪೂರ್ವ) ಸರ್ಕಾರಿ ಅಧೀನ ಕಾರ್ಯದರ್ಶಿ ಹೆಚ್.ಎಂ. ಸುದರ್ಶನ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ನೇಮಕಾತಿ ಪ್ರಕಟಣೆ ಮತ್ತು ಅಧಿಸೂಚನೆ ಹೊರಬೀಳಲಿದೆ.