ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ವತಿಯಿಂದ ‘ತಂಬಾಕು ಉತ್ಪನ್ನ’ಗಳ ದುಷ್ಪರಿಣಾಮದ ಬಗ್ಗೆ ಜನಜಾಗೃತಿ

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಶಿಲ್ಪಾ ಫೌಂಡೇಶನ್​, ಬನಶಂಕರಿ 2ನೇ ಹಂತದ ಬ್ರಿಗೇಡ್​ ಸಾಫ್ಟ್​​ಟೆಕ್​ ಪಾರ್ಕ್​​ ಸೇರಿ ಸುತ್ತಮುತ್ತಲಿನ ಟ್ರಾಫಿಕ್​ ಸಿಗ್ನಲ್​ನಲ್ಲಿ ತಂಬಾಕುನಿಂದ ಆಗುವ ಪರಿಣಾಮ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

“ದಮ್​ ಇದ್ರೆ ಧಮ್​ ಬಿಟ್ಟುಬಿಡಿ’, “ಧೂಮಪಾನ ನಿಲ್ಲಿಸಿ ಬದುಕಲು ಆರಂಭಿಸಿ’ “ನಿಮಗಾಗಿ ನಿಮ್ಮವರಿಗಾಗಿ ತಂಬಾಕು ತ್ಯಜಿಸಿ’ ಮತ್ತು “ತಂಬಾಕು ಮುಕ್ತ ಜೀವನ’ ಲಕ ಹಿಡಿದು ಜಾಥಾ ನಡೆಸಲಾಯಿತು. ಶಿಲ್ಪಾ ಫೌಂಡೇಶನ್​ನ ಸ್ವಯಂ ಸೇವಕರು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಹೂ,ಹಣ್ಣು ನೀಡಿ ತಂಬಾಕು ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿದರು.

ಸಂಸ್ಥೆ ಸಂಸ್ಥಾಪಕ ಅಚ್ಚುತ್​ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗುತ್ತಿರುವುದು ಅಪಾಯಕಾರಿ ಬೆಳವಣಿಗೆ.ಯುವ ಜನಾಂಗವೂ ಚಟ ಬೆಳಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳುತ್ತಿದೆ. ತಂಬಾಕು ಉತ್ಪನ್ನಗಳ ಮಾರಾಟ ತಡೆಗೆ ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ. ತಂಬಾಕು ಸೇವನೆ ತ್ಯಜಿಸುವ ಮೂಲಕ ಆರೋಗ್ಯಯುತ ಜೀವನಶೈಲಿ ರೂಪಿಸಿಕೊಳ್ಳಬೇಕು. ಇವುಗಳ ಸೇವನೆ ಬದಲಾಗಿ ಪುಸ್ತಕಗಳನ್ನು ಅಭ್ಯಾಸಿಸಿದರೆ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.