ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯವನ್ನು ಆಡಲು ಆರ್ ಸಿ ಬಿ ತಂಡ ಒಪ್ಪಿದೆ ಎಂಬುದಾಗಿ ತಿಳಿದು ಬಂದಿದೆ. ಇದಲ್ಲದೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ಆರ್ ಸಿ ಬಿ ತಂಡದ ಉದ್ಘಾಟನಾ ಪಂದ್ಯಾವಳಿಗಳು ಕೂಡ ನಡೆಯಲಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿದ ನಂತ್ರ, ಸುರಕ್ಷತೆಯ ಮಾರ್ಗಸೂಚಿ, ಮಾನದಂಡವನ್ನು ನಿಗದಿ ಪಡಿಸಲಾಗಿತ್ತು. ಅದರಂತೆ ಐಪಿಎಲ್ ಪಂದ್ಯಾವಳಿ ನಡೆಸೋದಕ್ಕೂ ಸೂಚಿಸಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಐಪಿಎಲ್ ಪಂದ್ಯ ಆಡಲು ಆರ್ ಸಿ ಬಿ ತಂಡ ಒಪ್ಪಿಗೆ ಸೂಚಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆರ್ ಸಿ ಬಿ ಉದ್ಘಾಟನಾ ಪಂದ್ಯ ಕೂಡ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ 5 ಪಂದ್ಯ ಆಡಲು ಆರ್ ಸಿ ಬಿ ತಂಡ ಸಮ್ಮತಿ ಸೂಚಿಸಿದೆ.




