ಬೆಂಗಳೂರು : ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣಗಿದ/ಅಪಾಯಕಾರಿ ಮರಗಳು ಮತ್ತು ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ನಡೆಸಿದ್ದಾಗೆ ಆಯುಕ್ತರಾದಂತ ರಾಜೇಂದ್ರ ಚೋಳನ್ ಮಾಹಿತಿ ನೀಡಿದ್ದಾರೆ.
ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಕೆರೆಗಳಲ್ಲಿ ಕೇಂದ್ರ ನಗರ ಪಾಲಿಕೆಯ ಅರಣ್ಯ ಘಟಕದಿಂದ 02-09-2025 ರಿಂದ ಇಲ್ಲಿಯವರೆಗೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಒಣಗಿದ ಹಾಗೂ ಅಪಾಯಕಾರಿ ಮರಗಳು ಮತ್ತು ಒಣಗಿದ ಹಾಗೂ ಅಪಾಯಕಾರಿ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ವಲಯವಾರು ತೆರವುಗೊಳಿಸಿದ ಮರ, ರೆಂಬೆ ಕೊಂಬೆಗಳ ವಿವರಗಳು ಕೆಳಗಿನಂತಿವೆ:
ವಲಯ-1 ರ ಸಿ.ವಿ. ರಾಮನ್ ನಗರ ವ್ಯಾಪ್ತಿಯಲ್ಲಿ:
* ಒಣಗಿದ ಮರಗಳು – 20
* ಒಣಗಿದ ರೆಂಬೆ-ಕೊಂಬೆಗಳು – 193
* ಅಪಾಯಕಾರಿ ಮರಗಳು – 10
* ಅಪಾಯಕಾರಿ ಕೊಂಬೆಗಳು –159
ವಲಯ-2 ರ ಗಾಂಧಿನಗರ ವ್ಯಾಪ್ತಿಯಲ್ಲಿ
* ಒಣಗಿದ ಮರಗಳು – 22
* ಒಣ ಕೊಂಬೆಗಳು – 202
* ಅಪಾಯಕಾರಿ ಮರಗಳು – 5
* ಅಪಾಯಕಾರಿ ಕೊಂಬೆಗಳು – 210
ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ತೆರವುಗೊಳಿಸಿದ ಒಟ್ಟು ವಿವರ:
* ಒಣಗಿದ ಮರಗಳು – 42
* ಒಣಗಿದ ರೆಂಬೆ-ಕೊಂಬೆಗಳು – 395
* ಅಪಾಯಕಾರಿ ಮರಗಳು – 15
* ಅಪಾಯಕಾರಿ ಕೊಂಬೆಗಳು – 369
ನಗರದಲ್ಲಿ ಒಣಗಿದ ಹಾಗೂ ಅಪಾಯಕಾರಿ ಮರಗಳು ಹಾಗೂ ರೆಂಬೆ ಕೊಂಬೆಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯುವ ಹಾಗೂ ಸಾರ್ವಜನಿಕರ ಜೀವ, ಆಸ್ತಿ-ಪಾಸ್ತಿ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆಗಳನ್ನು ಕೇಂದ್ರ ನಗರ ಪಾಲಿಕೆಯ ಅರಣ್ಯ ವಿಭಾಗದಿಂದ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಇದೇ ರೀತಿಯ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳು ನಿರಂತರವಾಗಿ ಕೈಗೊಳ್ಳಲಾಗುತ್ತದೆ.




