RTE 2ನೇ ಸುತ್ತಿನ ಸೀಟು ಹಂಚಿಕೆಗಳ ಪಟ್ಟಿ ಪ್ರಕಟ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ RTE 2ನೇ ಸುತ್ತಿನ ಸೀಟು ಹಂಚಿಕೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 921 ಅರ್ಹ ಮಕ್ಕಳನ್ನು ಲಾಟರಿ ಮೂಲಕ ಸೀಟು ಹಂಚಿಕೆ ಮಾಡಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಇಲಾಖೆಯು, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದ 2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಹ 7328 ಮಕ್ಕಳನ್ನು ಎರಡನೇ ಸುತ್ತಿನ ಲಾಟರಿಗೆ ಪರಿಗಣಿಸಿದ್ದು ದಿನಾಂಕ:16.06.2025 ರಂದು ಆನ್‌ಲೈನ್ ಮೂಲಕ ಲಾಟರಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಿದೆ.

ಈ ಎರಡನೇ ಸುತ್ತಿನ ಲಾಟರಿ, ಪುಕ್ರಿಯೆಯಲ್ಲಿ 921 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪೋಷಕರ ಹಂಚಿಕೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌.ಎಂ.ಎಸ್ ಮೂಲಕ ಸೀಟು ಮಾಹಿತಿಯನ್ನು ನೀಡಲಾಗಿದೆ. ಸಂಬಂಧಿಸಿದ ಪೋಷಕರು ದಿನಾಂಕ:17.06.2025 ರಿಂದ 21.06.2025 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ಹಂಚಿಕೆ ವಿವರ ತಿಳಿಸಿದೆ. ಸೀಟು ದಾಖಲಾತಿ ಇಲಾಖಾ ವೆಬ್‌ಸೈಟ್ www.schooleducation.karnataka.gov.in ನಲ್ಲಿ ಲಭ್ಯವಿದೆ ಎಂದಿದೆ.