ಬೆಂಗಳೂರು: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದಂತ ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ನಿಷೇಧಿಸಲಾಗಿದೆ.
ಈ ಸಂಬಂಧ ಫಿಲ್ಮಂ ಚೇಂಬರ್ ಮಹತ್ವದ ಸಭೆ ನಡೆಸಿ, ಇನ್ಮುಂದೆ ಗಾಯಕ ಸೋನು ನಿಗಮ್ ಅವರಿಂದ ಕನ್ನಡದ ಚಿತ್ರಗಳ ಹಾಡುಗಳನ್ನು ಹಾಡಿಸದೇ ಇರೋದಕ್ಕೆ ನಿರ್ಧರಿಸಲಾಗಿದೆ.
ಇದಕ್ಕೂ ಮೊದಲು ಸೋನು ನಿಗಮ್ ಹೇಳಿಕೆಯ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪೊಲೀಸರಿಗೆ ದೂರು ನೀಡಿತ್ತು. ಈ ದೂರು ಆದರಿಸಿ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಯಕ ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆಯೂ ಪೊಲೀಸರು ಸೋನು ನಿಗಮ್ ಗೆ ನೋಟಿಸ್ ನೀಡಿದ್ದರು.



