ಬೆಂಗಳೂರು: ಹೈಕೋರ್ಟ್ ಸೂಚನೆಯಿಂದಾಗಿ ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ ಮಾಡಲಾಗಿದೆ. ಈ ಕ್ಷಣದಿಂದಲೇ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂಬುದಾಗಿ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮುಷ್ಕರ ಮುಂದೂಡಿದ್ರೆ ಎಸ್ಮಾ ಕಾಯ್ದೆ ಉಲ್ಲಂಘನೆ ಆಗಲ್ಲ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಯಬೇಕು. ಜಂಟಿ ಕ್ರಿಯಾ ಸಮಿತಿಗೆ ನೋಟಿಸ್ ಕೊಡಿ ಎಂಬುದಾಗಿ ಹೈಕೋರ್ಟ್ ತಿಳಿಸಿದೆ ಎಂದರು.
ನಾವು ಹೈಕೋರ್ಟ್ ಸೂಚನೆಯ ಕಾರಣದಿಂದ ಮುಷ್ಕರ ಮುಂದೂಡಿಕೆ ಮಾಡಲಾಗಿದೆ. ಕೋರ್ಟ್ ಮುಂದಿನ ಆದೇಶದಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಆಗಸ್ಟ್.7ಕ್ಕೆ ಹೈಕೋರ್ಟ್ ವಿಚಾರಣೆ ನಿಗದಿ ಮಾಡಿದೆ. ಕೋರ್ಟ್ ತೀರ್ಪು ಏನು ನೀಡಲಿದೆ ಎಂಬುದಾಗಿ ಕಾದು ನೋಡಬೇಕು ಎಂದರು.
ನಾವು ಮುಷ್ಕರವನ್ನು ಮುಂದೂಡಿದ್ದೇವೆ. ಮುಷ್ಕರ ಮುಂದೂಡಿಕೆ ಮಾಡಿದ್ದರಿಂದ ಎಸ್ಮಾ ಕಾಯ್ದೆ ಉಲ್ಲಂಘನೆಯಾಗುವುದಿಲ್ಲ. ಎಲ್ಲರೂ ದಯಮಾಡಿ ಕೆಲಸಕ್ಕೆ ಹೋಗಿ. ನಾವು ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂಬುದಾಗಿ ತಿಳಿಸಿದರು.



