ಟೆಕ್ಕಿ ಅತುಲ್ ಸಾವಿನ ನಿಗೂಢತೆ ಬೇಧಿಸಲು ಪೊಲೀಸ್ ಸಾಹಸ; ಪತ್ನಿ, ಅತ್ತೆ ಸೇರಿ ಮೂವರ ಬಂಧನ

ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಸಾವಿನ ನಿಗೂಢತೆ ತಿಳಿಯಲು ತನಿಖೆಯ ಅಖಾಡಕ್ಕೆ ಧುಮುಕಿರುವ ಬೆಂಗಳೂರು ಪೊಲೀಸರು ಅತುಲ್ ಪತ್ನಿ, ಆತುಲ್​ ಅತ್ತೆ, ಹಾಗೂ ಭಾಮೈದನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿರುವ ಮಾರತಹಳ್ಳಿ ಪೊಲೀಸರು ಅತುಲ್ ಪತ್ನಿ ನಿಖಿತಾ ಸಿಂಘಾನಿಯ, ಆತುಲ್​ ಅತ್ತೆ, ನಿಶಾ ಸಿಂಘಾನಿಯಾ ಹಾಗೂ ಭಾಮೈದ ಅನುರಾಗ್​ ಅವರ ಬಂಧನಕ್ಕೆ ಬಲೇ ಬೀಸಿದ್ದರು. ನಾಪತ್ತೆಯಾಗಿದ್ದ ಆರೋಪಿ ಅತುಲ್ ಪತ್ನಿ ನಿಖಿತಾಳನ್ನು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಲಾಗಿತ್ತು. ಆಕೆ ನೀಡಿದ ಮಾಹಿತಿ ಆಧರಿಸಿ ನಿಶಾ ಸಿಂಘಾನಿಯ ಅನುರಾಗ್​ನನ್ನು ಅಲಹಾಬಾದ್​ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.