ರಾಜ್ಯದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸೇವೆ ಪುನರಾರಂಭ

ಮೈಸೂರು: ಹಬ್ಬನಘಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್‌ನಿಂದಾಗಿ ಈ ಹಿಂದೆ ರದ್ದುಗೊಳಿಸಲಾಗಿದ್ದ, ಭಾಗಶಃ ರದ್ದುಗೊಳಿಸಲಾಗಿದ್ದ ಮತ್ತು ನಿಯಂತ್ರಿಸಲಾಗಿದ್ದ ಕೆಲವು ರೈಲು ಸೇವೆಗಳನ್ನು ಪುನರಾರಂಭಿಸಲಾಗಿದೆ. ಅವುಗಳ ವಿವರ ಹೀಗಿದೆ:

1. ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು, ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ರದ್ದುಗೊಳಿಸಲಾಗಿತ್ತು. ಈಗ ಈ ರೈಲು ಎಂದಿನಂತೆ ಅರಸೀಕೆರೆಯಿಂದ ಮೈಸೂರಿಗೆ ತನ್ನ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.

2. ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು, ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿತ್ತು. ಈಗ ಈ ರೈಲು ಮೈಸೂರಿನಿಂದ ಹೊರಟು ಶಿವಮೊಗ್ಗ ಟೌನ್‌ವರೆಗೆ ತನ್ನ ಪೂರ್ಣ ಮಾರ್ಗದಲ್ಲಿ ಸಂಚರಿಸಲಿದೆ.

3. ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು, ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿತ್ತು. ಈಗ ಈ ರೈಲು ಮೈಸೂರಿನಿಂದ ಹೊರಟು ತಾಳಗುಪ್ಪದವರೆಗೆ ತನ್ನ ನಿಗದಿತ ವೇಳಾಪಟ್ಟಿಯಂತೆ ಚಲಿಸಲಿದೆ.