ಕಲಬುರಗಿಯಲ್ಲಿ 6.06 ಎಕರೆ ಪ್ರದೇಶದಲ್ಲಿ ವಚನ ಮಂಟಪ ನಿರ್ಮಾಣ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಲ್ಯಾಣ ನಾಡಿನ ಶರಣ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಸುಸಜ್ಜಿತ ‘ವಚನ ಮಂಟಪ’ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶರಣರ ತತ್ವಗಳು ಮತ್ತು ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸಮ ಸಮಾಜದ ಆಶಯವನ್ನು ವಿಸ್ತರಿಸುವಲ್ಲಿ ವಚನ ಮಂಟಪ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ.

ಕಲಬುರಗಿಯ ಕಪನೂರಿನಲ್ಲಿ 6.06 ಎಕರೆ ಪ್ರದೇಶದಲ್ಲಿ ವಚನ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಶರಣ ಶ್ರೇಷ್ಠರ ಪರಿಚಯ, ಅವರ ವಚನಗಳ ಪ್ರದರ್ಶನ ವ್ಯವಸ್ಥೆ, ವಸ್ತುಸಂಗ್ರಹಾಲಯ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

ವಚನ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ತಜ್ಞರು ಸಿದ್ಧಪಡಿಸಿರುವ ವಿವಿಧ ವಿನ್ಯಾಸ ಮತ್ತು ಮಾದರಿಗಳನ್ನು ಪರಿಶೀಲಿಸಿ ಚರ್ಚಿಸಲಾಗಿದೆ. ಶರಣ ಪರಂಪರೆ, ಸಾಹಿತ್ಯ ಮತ್ತು ಸಮಾನತೆಯ ತತ್ವಗಳನ್ನು ಜನರಿಗೆ ತಲುಪಿಸುವ ಕೇಂದ್ರವಾಗಿ ವಚನ ಮಂಟಪವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.